ವಿಭಾಗ: ವ್ಯಕ್ತಿ ವಿಚಾರ
ಈ ವಿಭಾಗದಲ್ಲಿರುವ 10+ ಜ್ಞಾನ ಪುಟಗಳು
ಬಸವಣ್ಣ (ಬಸವೇಶ್ವರ): ೧೨ನೇ ಶತಮಾನದ ಮಹಾನ್ ಸಮಾಜ ಸುಧಾರಕರು ಮತ್ತು ವಚನ ಚಳವಳಿಯ ನೇತಾರ
ಭಾರತದ ಇತಿಹಾಸದಲ್ಲಿ ೧೨ನೇ ಶತಮಾನವು ಒಂದು ಕ್ರಾಂತಿಕಾರಕ ಸಾಮಾಜಿಕ ಮತ್ತು ಧಾರ್ಮಿಕ ಜಾಗೃತಿಯ ಕಾಲಘಟ್ಟ. ಈ ಜಾಗೃತಿಯ ಕೇಂದ್ರಬಿಂದುವಾಗಿದ್ದವರು "ವಿಶ್ವಗುರು" ಬಸವಣ್ಣನವರು. ಕೇವಲ ಧಾರ್ಮಿಕ ನಾಯಕರಾಗಿ ಉಳಿಯದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದಿದ, ಜಾತಿ-ಲಿಂಗ-ವರ್ಗ ತಾರತಮ್ಯಗಳ ವಿರುದ್ಧ ಸಮರವನ್ನೇ ಸಾರಿದ ಮಹಾನ್ ಮಾನವತಾವಾದಿ ಅವರು. ರಾಜಮನೆತನದಲ್ಲಿ ಮಂತ್ರಿಯಾಗಿದ್ದುಕೊಂಡೇ (ಕಲ್ಯಾಣದ ಬಿಜ್ಜಳನ ಆಸ್ಥಾನದಲ್ಲಿ) ಸಮಾಜದ ತಳಮಟ್ಟದ ಜನರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಸವಣ್ಣನವರು, "ವಚನ ಚಳವಳಿ" ಎಂಬ ಜ್ಞಾನದ ಮಹಾಪೂರಕ್ಕೆ ಕಾರಣರಾದರು.
ಆಲೂರು ವೆಂಕಟರಾಯರು: ಕರ್ನಾಟಕ ಏಕೀಕರಣದ ಕನಸು ಕಂಡ "ಕನ್ನಡ ಕುಲಪುರೋಹಿತ"
ನಾವು ಇಂದು "ಕರ್ನಾಟಕ" ಎಂಬ ರಾಜ್ಯದಲ್ಲಿ ಆರಾಮವಾಗಿ ಬದುಕುತ್ತಿದ್ದೇವೆ. ನವೆಂಬರ್ ೧ ಬಂತೆಂದರೆ "ಕನ್ನಡ ರಾಜ್ಯೋತ್ಸವ" ಎಂದು ಸಂಭ್ರಮಿಸುತ್ತೇವೆ. ಆದರೆ, ಸುಮಾರು ೭೦-೮೦ ವರ್ಷಗಳ ಹಿಂದೆ "ಕರ್ನಾಟಕ" ಎಂಬ ಒಂದೇ ರಾಜ್ಯವೇ ಇರಲಿಲ್ಲ ಎಂಬ ಸತ್ಯ ನಮ್ಮಲ್ಲಿ ಎಷ್ಟೋ ಜನರಿಗೆ ತಿಳಿದಿಲ್ಲ.
ಕುವೆಂಪು: ಕನ್ನಡಕ್ಕೆ "ವಿಶ್ವಮಾನವ" ಸಂದೇಶ ನೀಡಿದ ಯುಗದ ಕವಿ
ನಾವು ಪ್ರತಿದಿನ ಹಾಡುವ ನಮ್ಮ ನಾಡಗೀತೆ "ಜಯ ಭಾರತ ಜನನಿಯ ತನುಜಾತೆ"ಯನ್ನು ಕೇಳಿದ ತಕ್ಷಣ ನಮಗೆ ನೆನಪಾಗುವ ಹೆಸರು 'ಕುವೆಂಪು'. ಕನ್ನಡ ಸಾಹಿತ್ಯವನ್ನು ಜಗತ್ತಿನ ಮಟ್ಟಕ್ಕೆ ಕೊಂಡೊಯ್ದ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನ್ ಚೇತನ ಅವರು.
ಹರ್ಡೇಕರ್ ಮಂಜಪ್ಪ
ಹರ್ಡೇಕರ ಮಂಜಪ್ಪ (೧೮೮೬–೧೯೪೭) ಕರ್ನಾಟಕದ ಪ್ರಮುಖ ಸಾಮಾಜಿಕ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಮತ್ತು ಸಾಹಿತಿ. ಅವರನ್ನು "ಕರ್ನಾಟಕದ ಗಾಂಧಿ" ಎಂದು ಹೆಸರಿಸಲಾಗುತ್ತದೆ. ಅವರು ತಮ್ಮ ಜೀವನವನ್ನು ಸಮಾಜ ಸುಧಾರಣೆ, ಸ್ವಾತಂತ್ರ ಚಳವಳಿ ಮತ್ತು ಗಾಂಧಿವಾದದ ತತ್ವಗಳ ಪ್ರಸಾರಕ್ಕೆ ಸಮರ್ಪಿಸಿದರು.

ಬಿ. ಎಂ. ಶ್ರೀಕಂಠಯ್ಯ
'ಕನ್ನಡ ನವೋದಯದ ಕಾರ್ಯ ಪ್ರವರ್ತಕ', 'ಕನ್ನಡದ ಕಣ್ವ', 'ಕರ್ನಾಟಕದ ಆಚಾರ್ಯ ಪುರುಷ' ಎಂದು ಖ್ಯಾತನಾಮರಾದ ಬಿ.ಎಂ.ಶ್ರೀ. (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ) ಅವರು ಕನ್ನಡ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಡುವುದರ ಮೂಲಕ ಹೊಸಗನ್ನಡ ಸಾಹಿತ್ಯವನ್ನು ಸೃಷ್ಟಿಸಿದವರು. ಹತ್ತೊಂಬತ್ತನೆಯ ಶತಮಾನದಿದಂದ ಕನ್ನಡ ಸಾಹಿತ್ಯ ರಚನೆಯಲ್ಲಿ ಜಡಗಟ್ಟಿ ಅರ್ಥಹೀನವಾಗಿದ್ದ, ಸಾಂಪ್ರದಾಯಿಕ ಲಕ್ಷಣಗಳಿಗೆ ಕಟ್ಟುವಿದ್ದು ಶುಷ್ಕವಾಗಿದ್ದ ಸಂದರ್ಭದಲ್ಲಿ, ಶ್ರೀಯವರು ಬರೆದ 'ಇಂಗ್ಲೀಷ್ ಗೀತಗಳು' ಕೃತಿ ಕನ್ನಡದ ನವೋದಯ ಕಾವ್ಯ ಯುಗಕ್ಕೆ ನಾಂದಿ ಹಾಡಿತು. ಅವರು 1915 ರಿಂದ ಬಿಡಿ ಬಿಡಿಯಾಗಿ ಬರೆದುಕೊಂಡು ಬಂದಿದ್ದ ಅನುವಾದಿತ ಮತ್ತು ಸ್ವತಂತ್ರ ಕವನಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಮೊತ್ತ ಮೊದಲು 'ಶ್ರೀ' ಎಂಬ ಕಾವ್ಯನಾಮದೊದಂದಿಗೆ 1926ರಲ್ಲಿ ಪ್ರಕಟಿಸಿತು.

ಮಹಾಕವಿ ರನ್ನ
ಹತ್ತನೆಯ ಶತಮಾನದಲ್ಲಿದ್ದ ರನ್ನ ಕರ್ನಾಟಕದ ಒಬ್ಬ ಹೆಮ್ಮೆಯ ಕವಿ. ಕವಿತ್ರಯರಲ್ಲಿ ಒಬ್ಬನಾದ ರನ್ನ ಬಿಜಾಪುರ ಜಿಲ್ಲೆಯ ಮುದುವೊಳಲಿನಲ್ಲಿ ಜನಿಸಿದನು. ಚಕ್ರವರ್ತಿಯ ಪ್ರೊತ್ಸಾಹದಿಂದ ರನ್ನನು ಕಾವ್ಯ ರಚನೆ ಮಾಡಿದನು. ತನ್ನ ಆಶ್ರಯದಾತನ ಕೀರ್ತಿಯನ್ನು ಬೆಳಾಗಿಸಲೆಂದು ಮಹಾಭಾರತದ ವೀರನಾದ ಭೀಮನೊಡನೆ ಅವನನ್ನು ಸಮೀಕರಿಸಿ, 'ಸಾಹಸಭೀಮವಿಜಯ' ಎಂಬ ಚಂಪೂ ಕಾವ್ಯವನ್ನು ರಚಿಸಿದನು. ಇದನ್ನು 'ಗದಾಯುದ್ಧ'ವೆಂದೇ ಕರೆಯುವುದು ರೂಢಿ. ಕಾವ್ಯವನ್ನು ಕೇಳಿ ಆನಂದಿಸಿದ ದೊರೆಯು ಅವನಿಗೆ 'ಕವಿಚಕ್ರವರ್ತಿ' ಎಂಬ ಬಿರುದನ್ನು ಕೊಟ್ಟನು.

ವಿ. ಸೀತಾರಾಮಯ್ಯ
ವಿ. ಸೀ. ಎಂದೇ ಕನ್ನಡ ನವೋದಯ ಸಾಹಿತ್ಯದಲ್ಲಿ ಪ್ರಖ್ಯಾತರಾದ ವಿ. ಸೀತಾರಾಮಯ್ಯನವರು ಕವಿಯಾಗಿ, ವಿಮರ್ಶಕರಾಗಿ ಬಹುಮುಖ ಪ್ರತಿಭೆಯ ಲೇಖಕರು. ವಿ.ಸೀ.ಯವರು ಧೀಮಂತ ಸಾಹಿತಿಯಷ್ಟೇ ಅಲ್ಲದೆ ನಾಡಿನ ಶ್ರೇಷ್ಠ ಆರ್ಥಿಕ ಚಿಂತಕರೂ ಆಗಿದ್ದರು.

ಜಿ. ಪಿ. ರಾಜರತ್ನಂ
'ನಾಯಿಮರಿ ನಾಯಿಮರಿ ತಿಂಡಿ ಬೇಕೆ', 'ಬಣ್ಣದ ತಗಡಿನ ತುತ್ತೂರಿ' ಸಾಲುಗಳು ನೆನಪಿಸುವುದು ರಾಜರತ್ನಂ ಅವರನ್ನು. ರಾಜರತ್ನಂರವರ 'ಎಂಡ ಕುಡುಕ ರತ್ನನ ಪದಗಳು' ಪದ್ಯಗಳಲ್ಲಿ ಕಂಡು ಬರುವ ಕುಡುಕರು ಮಾತಾಡುವ ಶೈಲಿಯ ಭಾಷೆ ವಿಶಿಷ್ಟವಾಗಿದೆ.

ಎಸ್. ನಿಜಲಿಂಗಪ್ಪ
ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿ, ಅದರ ಯಶಸ್ಸಿಗೆ ಶಕ್ತಿಮೀರಿ ದುಡಿದ ಎಸ್. ನಿಜಲಿಂಗಪ್ಪನವರು, ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಹಾಗೂ ಇನ್ನಿತರ ರಾಜಕೀಯ ಹುದ್ದೆಗಳಲ್ಲಿ ಯಶಸ್ಸನ್ನು ಗಳಿಸಿದವರು. ಕರ್ನಾಟಕದ ಏಕೀಕರಣ, ಶರಾವತಿ ಜನವಿದ್ಯುತ್ ಯೋಜನೆ, ಕೃಷ್ಣ ಮೇಲ್ಡಂಡೆ ಯೋಜನೆಗಳು ಹೀಗೆ ಹಲವಾರು ಯೋಜನೆಗಳು ನಿಜಲಿಂಗಪ್ಪನವರ ನೆನಪು ನಾಡಿನ ಜನಮನದಲ್ಲಿ ಹಚ್ಚ ಹಸಿರಾಗಿ ಇಡಬಲ್ಲವು.

ಡಾ|| ಚಂದ್ರಶೇಖರ ಕಂಬಾರ
ಕನ್ನಡ ಸಾಹಿತ್ಯದಲ್ಲಿ ನವ್ಯದ ಕಹಳೆ ಜೋರಾಗಿ ಮೊಳಗುತ್ತಿದ್ದ ಅರವತ್ತರ ದಶಕದಲ್ಲಿ, ಉತ್ತರ ಕರ್ನಾಟಕದಿಂದ ಮೂಡಿಬಂದ ಕಾವ್ಯ ಧ್ವನಿಗಳಲ್ಲಿ ಡಾ|| ಚಂದ್ರಶೇಖರ ಕಂಬಾರರ ಹೆಸರು ಪ್ರಮುಖವಾದದ್ದು. ಭಾರತೀಯ ಜ್ಞಾನಪೀಠವು ಡಾ. ಚಂದ್ರಶೇಖರ ಕಂಬಾರರಿಗೆ, ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೨೦೧೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.