ಜ್ಞಾನಪೀಠ ಪ್ರಶಸ್ತಿ ಪಡೆದ ಏಳನೇಯ ಕನ್ನಡಿಗ ಹಾಗೂ ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರು ಗಿರೀಶ್ ಕಾರ್ನಾಡರು. ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡರು ಕನ್ನಡದಲ್ಲಿ ಹೊಸ ಅಲೆಯ ನಾಟಕಗಳನ್ನು ರಚಿಸಿ, ರಂಗಪ್ರಯೋಗ ಮಾಡಿದ್ದಲ್ಲದೆ, ನಾಟಕ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಅನೇಕ ಕಲಾತ್ಮಕ ಚಿತ್ರಗಳಲ್ಲಿ ಅಭಿನಯ, ಚಿತ್ರಕಥೆ, ಸಂಭಾಷಣೆ ನೀಡಿ ಅನೇಕ ಪ್ರಶಸ್ತಿ ಗೌರವಗಳಿಗೆ ಭಾಜನದಾಗಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ನಿರ್ದೇಶನ ಕೂಡ ಮಾದಿದ್ದಾರೆ. ದೂರದರ್ಶನದ ಧಾರಾವಾಹಿಗಳಲ್ಲಿ ಅಭಿನಯಿಸಿ, ನಿರ್ದೇಶಿಸಿ ಜನಪ್ರಿಯತೆ ಗಳಿಸಿದ್ದಾರೆ.
'ನಿತ್ಯೋತ್ಸವ ಕವಿ' ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ.
ಉತ್ಕೃಷ್ಟ ಕವಿಯಾಗಿ ಪ್ರಬುದ್ಧ ವಿಮರ್ಶಕರಾಗಿ, ಸಂಪಾದಕರಾಗಿ, ಉತ್ತಮ ಅಧ್ಯಾಪಕರಾಗಿ, ದಕ್ಷ ಆಡಳಿತಗಾರರಾಗಿ, ಸಂಘಟಕರಾಗಿ, ಕನ್ನಡದ ಹಿತರಕ್ಷಕರಾಗಿ, ಸ್ನೇಹ ಜೀವಿಯಾಗಿ, ಶಿಷ್ಯ ವತ್ಸಲರಾಗಿ, ಮಾನವತಾವಾದಿಯಾಗಿ ಬಾಳಿದ ಜಿ. ಎಸ್. ಶಿವರುದ್ರಪ್ಪ ನವರು ಕನ್ನಡದ ಹೆಮ್ಮೆಯ ಕವಿ.
ಇವರು ೧೩ ಕಾವ್ಯ ಸಂಕಲನಗಳನ್ನು, ಹದಿನಾರು ವಿಮರ್ಶೆ/ ಮೀಮಾಂಸೆ ಗ್ರಂಥಗಳನ್ನು, ನಾಲ್ಕು ಪ್ರವಾಸ ಕಥನಗಳನ್ನು, ಒಂದು ವ್ಯಕ್ತಿ ಚಿತ್ರವನ್ನು, ಹಲವಾರು ಸಂಪಾದಿತ ಗ್ರಂಥಗಳನ್ನು, ಅನುವಾದಗಳನ್ನು ಪ್ರಕಟಿಸಿದ್ದಾರೆ.
ಸುಳ್ಳು ಕೆಮ್ಮು ಸಂಗೀತವನ್ನು ಸೂಚಿಸುತ್ತದೆ. ಒಣಕೆಮ್ಮು ಸಾವನ್ನು ಸೂಚಿಸುತ್ತದೆ.