ಕನ್ನಡ ಸುಗಮ ಸಂಗೀತಕ್ಕೆ ಆದ್ಯ ಪ್ರವರ್ತಕ ಎಂಬ ಕೀರ್ತಿಗೆ ಭಾಜನರಾದವರು ಪಿ. ಕಾಳಿಂಗರಾವ್. ಅಷ್ಟೇ ಅಲ್ಲದೇ ಕನ್ನಡ ಭಾವಗೀತೆಗಳನ್ನು 1940, 1950, 1960 ರ ದಶಕಗಳಲ್ಲಿ ಜನಪ್ರಿಯಗೊಳಿಸಿದವರಲ್ಲಿ ಕಾಳಿಂಗರಾಯರು ಪ್ರಮುಖರು.
1947ರಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿರುವ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಕನ್ನಡ ನಾಡಿನ ಉದ್ದಗಲಕ್ಕೂ ಹಾಡುವ ಮೂಲಕ 'ಕರ್ನಾಟಕ ಏಕೀಕರಣ'ಕ್ಕೆ ಕಾಳಿಂಗರಾಯರು ನೀಡಿದ ಕೊಡುಗೆ ಅಮೂಲ್ಯ.