ಕನ್ನಡ ಸಾಹಿತ್ಯದ ಹೆಮ್ಮೆಯ ಕವಿ ಮತ್ತು ಸಂತ, ಶಿಶುನಾಳ ಷರೀಫರು ತಮ್ಮ ತತ್ವಪದಗಳಿಂದ ಜನರ ಮನೆ ಮಾತಾಗಿದ್ದಾರೆ. ಕರ್ನಾಟಕ ಸರ್ಕಾರವು ಅವರ ಹೆಸರಿನಲ್ಲಿ 1995ರಿಂದ 'ಸಂತ ಶಿಶುನಾಳ ಷರೀಫ ಪ್ರಶಸ್ತಿ'ಯನ್ನು ನೀಡುತ್ತಾ ಬಂದಿದೆ. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕಲಾವಿದರು ಮಾಡಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಶಸ್ತಿಯು ಶಾಲು, ಫಲಕ, ಹಾರ ಮತ್ತು 5 ಲಕ್ಷ ರೂಪಾಯಿಗಳನ್ನು ಒಳಗೊಂಡಿರುತ್ತದೆ.
'ಕರ್ನಾಟಕ ರತ್ನ' ಕರ್ನಾಟಕ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.
ಕನ್ನಡ ಸಾಹಿತ್ಯದಲ್ಲಿ ನವ್ಯದ ಕಹಳೆ ಜೋರಾಗಿ ಮೊಳಗುತ್ತಿದ್ದ ಅರವತ್ತರ ದಶಕದಲ್ಲಿ, ಉತ್ತರ ಕರ್ನಾಟಕದಿಂದ ಮೂಡಿಬಂದ ಕಾವ್ಯ ಧ್ವನಿಗಳಲ್ಲಿ ಡಾ|| ಚಂದ್ರಶೇಖರ ಕಂಬಾರರ ಹೆಸರು ಪ್ರಮುಖವಾದದ್ದು.
ಭಾರತೀಯ ಜ್ಞಾನಪೀಠವು ಡಾ. ಚಂದ್ರಶೇಖರ ಕಂಬಾರರಿಗೆ, ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೨೦೧೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.
ಆಟವು ಮುಗಿದ ನಂತರ ರಾಜ, ರಾಣಿ, ಜಾಕಿ, ಪುಡಿ ಎಲ್ಲವೂ ಒಂದೇ ಪ್ಯಾಕಿನ ಪ್ರಾಣಿಗಳೇ.