ಉತ್ಕೃಷ್ಟ ಕವಿಯಾಗಿ ಪ್ರಬುದ್ಧ ವಿಮರ್ಶಕರಾಗಿ, ಸಂಪಾದಕರಾಗಿ, ಉತ್ತಮ ಅಧ್ಯಾಪಕರಾಗಿ, ದಕ್ಷ ಆಡಳಿತಗಾರರಾಗಿ, ಸಂಘಟಕರಾಗಿ, ಕನ್ನಡದ ಹಿತರಕ್ಷಕರಾಗಿ, ಸ್ನೇಹ ಜೀವಿಯಾಗಿ, ಶಿಷ್ಯ ವತ್ಸಲರಾಗಿ, ಮಾನವತಾವಾದಿಯಾಗಿ ಬಾಳಿದ ಜಿ. ಎಸ್. ಶಿವರುದ್ರಪ್ಪ ನವರು ಕನ್ನಡದ ಹೆಮ್ಮೆಯ ಕವಿ.
ಇವರು ೧೩ ಕಾವ್ಯ ಸಂಕಲನಗಳನ್ನು, ಹದಿನಾರು ವಿಮರ್ಶೆ/ ಮೀಮಾಂಸೆ ಗ್ರಂಥಗಳನ್ನು, ನಾಲ್ಕು ಪ್ರವಾಸ ಕಥನಗಳನ್ನು, ಒಂದು ವ್ಯಕ್ತಿ ಚಿತ್ರವನ್ನು, ಹಲವಾರು ಸಂಪಾದಿತ ಗ್ರಂಥಗಳನ್ನು, ಅನುವಾದಗಳನ್ನು ಪ್ರಕಟಿಸಿದ್ದಾರೆ.
'ಕುವೆಂಪು' ಎಂಬ ಕಾವ್ಯನಾಮದಿಂದಲೇ ಪ್ರಸಿದ್ದರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು.
ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಕನ್ನಡದಲ್ಲಿ ೮೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
'ಶ್ರೀರಾಮಾಯಣ ದರ್ಶನಂ' ಇವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ.
ಹಲವರು ಹೆಚ್ಚು ಕಷ್ಟಪಟ್ಟು ಉಂಣುತ್ತಾರೆ - ಕೆಲವರು ಹೆಚ್ಚು ಉಂಡು ಕಷ್ಟಪಡುತ್ತಾರೆ.