ಜಗದೋದ್ಧಾರನ
ಆಡಿಸಿದಳ್ ಯಶೋದಾ || ಪ ||
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳ್ ಯಶೋದಾ || ಅ.ಪ ||
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದಾ || ೧ ||
ಅಣೋರಣೀಯನಾ ಮಹತೋಮಹಿಮನಾ
ಅಪ್ರಮೇಯನಾ ಆದಿಸಿದಳ್ ಯಶೋದಾ || ೨ ||
ಪರಮ ಪುರುಷನಾ ಪರವಾಸುದೇವನ
ಪುರಂದರ ವಿಠಲನಾ ಆಡಿಸಿದಳ್ ಯಶೋದಾ || ೩ ||
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು
ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!
ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.