ಪಿ. ಕಾಳಿಂಗರಾವ್

ಕನ್ನಡ ಸುಗಮ ಸಂಗೀತದ ಆದ್ಯ ಪ್ರವರ್ತಕ ಎಂಬ ಕೀರ್ತಿಗೆ ಭಾಜನರಾದವರು ಪಿ. ಕಾಳಿಂಗರಾವ್. ಅಷ್ಟೇ ಅಲ್ಲದೇ ಕನ್ನಡ ಭಾವಗೀತೆಗಳನ್ನು 1940, 1950, 1960 ರ ದಶಕಗಳಲ್ಲಿ ಜನಪ್ರಿಯಗೊಳಿಸಿದವರಲ್ಲಿ ಕಾಳಿಂಗರಾಯರು ಪ್ರಮುಖರು.
ಐದನೇ ತರಗತಿಯಲ್ಲಿ ಓದುತ್ತಿರುವಾಗಲೇ ಕಾಳಿಂಗರಾಯರು ಮುಂಡಾಜೆ ರಂಗನಾಥ 'ಅಂಬಾ ಪ್ರಸಾದಿತ ನಾಟಕ ಮಂಡಳಿ'ಗೆ ಸೇರಿಕೊಂಡರು. ನಂತರ ಗುಬ್ಬಿ ವೀರಣ್ಣನವರ 'ದಶಾವತಾರ' ನಾಟಕಕ್ಕೆ ಸಂಗೀತ ನೀಡಲಾರಂಭಿಸಿದರು.
ಇವರು ಸಂಗೀತ ನೀಡಿದ ಮೊದಲ ಚಿತ್ರ ಹಿಂದಿಯ 'ಪ್ರೇಮ್‍ಸಾಗರ್'. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕರಾದ ನಾಗೇಂದ್ರರಾಯರಿಗೆ ಕಾಳಿಂಗರಾಯರು ಪರಿಚಿತರಾದರು.
ನಾಗೇಂದ್ರರಾಯರು ನಿರ್ಮಿಸಿದ ವಸಂತಸೇನಾ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶಿಸಿದ ಕಾಳಿಂಗರಾಯರು, ಅದೇ ಚಿತ್ರದಲ್ಲಿ ಜೈನ ಸನ್ಯಾಸಿಯ ಪಾತ್ರವನ್ನೂ ನಿರ್ವಹಿಸಿದರು. ಇದಲ್ಲದೆ 'ರಾಯರ ಸೊಸೆ', 'ಕೃಷ್ಣಲೀಲಾ', 'ಜೀವನ ನಾಟಕ', 'ಮಹಾನಂದ', 'ಶಶಿಧರ ಬಿ. ಎ.' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 'ಕಿತ್ತೂರು ಚೆನ್ನಮ್ಮ', 'ತುಂಬಿದ ಕೊಡ', 'ಕೈವಾರ ಮಹಾತ್ಮೆ' ಮುಂತಾದ ಚಿತ್ರಗಳಿಗೆ ಹಾಡಿದ್ದಾರೆ. 'ಭಕ್ತ ರಾಮದಾಸ', 'ನಟಶೇಖರ', 'ಅಬ್ಬಾ ಆ ಹುಡುಗಿ', 'ಮಹಾಶಿಲ್ಪಿ', ಕಾಳಿಂಗರಾಯರು ಸಂಗೀತ ನಿರ್ದೇಶಿಸಿದ ಇನ್ನೂ ಕೆಲವು ಚಿತ್ರಗಳು.
1947ರಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿರುವ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಕನ್ನಡ ನಾಡಿನ ಉದ್ದಗಲಕ್ಕೂ ಹಾಡುವ ಮೂಲಕ 'ಕರ್ನಾಟಕ ಏಕೀಕರಣ'ಕ್ಕೆ ಕಾಳಿಂಗರಾಯರು ನೀಡಿದ ಕೊಡುಗೆ ಅಮೂಲ್ಯ.
ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಎರಡು ಬಲ್ಲವರಾಗಿದ್ದ ಕಾಳಿಂಗರಾಯರು ತಮ್ಮ ಸಂಗೀತ ಸಂಯೋಜನೆಗಳಲ್ಲಿ ಎರಡೂ ಪ್ರಕಾರಗಳನ್ನು ಸಮತೋಲನದಲ್ಲಿ ಬಳಸಿ ಹೊಸ ಬಗೆಯ ಇಂಪನ್ನು ಹಾಡಿಗೆ ನೀಡುತ್ತಿದ್ದರು. ಇದು ಸಂಗೀತದಲ್ಲಿ ಹೊಸ ಪ್ರಾಕಾರ ಮುಂದಿನ ಅನೇಕ ಸ್ವರ ಸಂಯೋಜಕರಿಗೆ ಮತ್ತು ಹಾಡುಗಾರರಿಗೆ ಮಾದರಿಯಾಯಿತು.
ಸಂಕ್ಷಿಪ್ತ ಪರಿಚಯ
ನಿಜನಾಮ | ಪಾಂಡೇಶ್ವರ ಕಾಳಿಂಗರಾವ್ |
ಜನನ | ೧914 ಆಗಸ್ಟ್ 31 |
ಮರಣ | ೧೯81 ಸೆಪ್ಟೆಂಬರ್ 22 |
ತಂದೆ | ಪಾಂಡೇಶ್ವರ ಪುಟ್ಟಯ್ಯ (ನಾರಾಯಣರಾವ್) |
ತಾಯಿ | ನಾಗಮ್ಮ |
ಜನ್ಮ ಸ್ಥಳ | ಬಾರಕೂರಿನ ಮೂಡುಕೆರೆ, ಉಡುಪಿ ಜಿಲ್ಲೆ |
ಪತ್ನಿ | ಮೀನಾಕ್ಷಮ್ಮ |
ಮಕ್ಕಳು | ಪ್ರೇಮ, ವಸಂತ, ಶರತ್ ಹಾಗೂ ಸಂತೋಷ್ |
ಚಲನಚಿತ್ರ ರಂಗ
ನಟನೆ | ವಸಂತಸೇನಾ, ರಾಯರ ಸೊಸೆ, ಕೃಷ್ಣಲೀಲಾ, ಜೀವನ ನಾಟಕ, ಮಹಾನಂದ, ಶಶಿಧರ ಬಿ. ಎ. |
ಗಾಯನ | ಕಿತ್ತೂರು ಚೆನ್ನಮ್ಮ, ತುಂಬಿದ ಕೊಡ, ಕೈವಾರ ಮಹಾತ್ಮೆ |
ಸಂಗೀತ ನಿರ್ದೇಶನ | ಭಕ್ತ ರಾಮದಾಸ, ನಟಶೇಖರ, ಅಬ್ಬಾ ಆ ಹುಡುಗಿ, ಮಹಾಶಿಲ್ಪಿ |
ಕಾಳಿಂಗರಾಯರ ಪ್ರಸಿದ್ಧ ಗೀತೆಗಳು
ಗೀತೆಗಳು | ರಚನೆ | ಹಾಡುಗಾರರು | ಸಂಗೀತ ನಿರ್ದೇಶನ | ಪ್ರಾಕಾರ |
---|---|---|---|---|
ಉದಯವಾಗಲಿ ನಮ್ಮ | ಹುಯಿಲುಗೋಳು ನಾರಾಯಣ ರಾವ್ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ನಾಡಭಕ್ತಿಗೀತೆ |
ಅಳುವ ಕಡಲೊಳು ತೇಲಿ ಬರುತಿದೆ | ಗೋಪಾಲಕೃಷ್ಣ ಅಡಿಗ | ಪಿ. ಕಾಳಿಂಗ ರಾವ್ | ಬಿ. ವಿ. ಶ್ರೀನಿವಾಸ್ | ಭಾವಗೀತೆ |
ಮೂಡಲ್ ಕುಣಿಗಲ್ ಕೆರೆ | ಸಾಂಪ್ರದಾಯಿಕ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಜಾನಪದ ಗೀತೆ |
ಹೇಳ್ಕೊಳಕ್ ಒಂದೂರು | ಜಿ. ಪಿ. ರಾಜರತ್ನಂ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಭಾವಗೀತೆ |
ಬ್ರಮ್ಮ ನಿಂಗೆ ಜೋಡಿಸ್ತೀನಿ | ಜಿ. ಪಿ. ರಾಜರತ್ನಂ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಭಾವಗೀತೆ |
ಅಂತಿಂಥ ಹೆಣ್ಣು ನೀನಲ್ಲ | ಕೆ. ಎಸ್. ನರಸಿಂಹಸ್ವಾಮಿ | ಪಿ. ಕಾಳಿಂಗ ರಾವ್ | ಜಿ. ಕೆ. ವೆಂಕಟೇಶ್ | ಭಾವಗೀತೆ |
ಯಾರು ಹಿತವರು ನಿನಗೆ | ಪುರಂದರ ದಾಸರು | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಭಕ್ತಿಗೀತೆ |
ಮಾಡು ಸಿಕ್ಕದಲ್ಲ | ಪುರಂದರ ದಾಸರು | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಭಕ್ತಿಗೀತೆ |
ನಗೆಯು ಬರುತಿದೆ | ಪುರಂದರ ದಾಸರು | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಭಕ್ತಿಗೀತೆ |
ಬಾಗಿಲೊಳು ಕೈ ಮುಗಿದು | ಕುವೆಂಪು | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಬಿ. ವಿ. ಶ್ರೀನಿವಾಸ್ | ಭಾವಗೀತೆ |
ಮುಗಿಲ ಮಾರಿಗೆ ರಾಗರತಿಯ | ದ. ರಾ. ಬೇಂದ್ರೆ | ಪಿ. ಕಾಳಿಂಗ ರಾವ್ | ಬಿ. ವಿ. ಶ್ರೀನಿವಾಸ್ | ಭಾವಗೀತೆ |
ಇಳಿದು ಬಾ ತಾಯಿ | ದ. ರಾ. ಬೇಂದ್ರೆ | ಪಿ. ಕಾಳಿಂಗ ರಾವ್ | ಬಿ. ವಿ. ಶ್ರೀನಿವಾಸ್ | ದೇಶಭಕ್ತಿಗೀತೆ |
ತೂಗಿರೋ ಚಿನ್ನವ | ಸಾಂಪ್ರದಾಯಿಕ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಲಾಲಿಹಾಡು |
ಯಾಕಳುವೆ ಎಲೆ ರಂಗ | ಸಾಂಪ್ರದಾಯಿಕ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಲಾಲಿಹಾಡು |
ಅದು ಬೆಟ್ಟ ಇದು ಬೆಟ್ಟ | ಸಾಂಪ್ರದಾಯಿಕ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಜಾನಪದ ಗೀತೆ |
ಬಾರಯ್ಯ ಬೆಳದಿಂಗಳೆ | ಸಾಂಪ್ರದಾಯಿಕ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಜಾನಪದ ಗೀತೆ |
ಅತ್ತಿಲ್ಲದ ಮನೆಗೆ | ಸಾಂಪ್ರದಾಯಿಕ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಜಾನಪದ ಗೀತೆ |
ಬೆಟ್ಟ ಬಿಟ್ಟಿಳಿಯುತ | ಸಾಂಪ್ರದಾಯಿಕ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ಜಾನಪದ ಗೀತೆ |
ಹೋಳಿಯ ಹುಣ್ಣಿಮೆ | ಆರ್. ಸಿ. ಭೂಷಣೂರಮಠ್ | ಪಿ. ಕಾಳಿಂಗ ರಾವ್ | ಬಿ. ವಿ. ಶ್ರೀನಿವಾಸ್ | ಭಾವಗೀತೆ |
ಅನಂತದಿಂ | ಕುವೆಂಪು | ಪಿ. ಕಾಳಿಂಗ ರಾವ್ | ಬಿ. ವಿ. ಶ್ರೀನಿವಾಸ್ | ಭಾವಗೀತೆ |
ಏರಿಸಿ ಹಾರಿಸಿ ಕನ್ನಡದ | ಬಿ. ಎಂ. ಶ್ರೀಕಂಠಯ್ಯ | ಪಿ. ಕಾಳಿಂಗ ರಾವ್, ಮೋಹನಕುಮಾರಿ ಮತ್ತು ಸಂಗಡಿಗರು | ಪಿ. ಕಾಳಿಂಗ ರಾವ್ | ದೇಶಭಕ್ತಿಗೀತೆ |