'ಕುವೆಂಪು' ಎಂಬ ಕಾವ್ಯನಾಮದಿಂದಲೇ ಪ್ರಸಿದ್ದರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು.
ಇಂಗ್ಲೀಷ್‍ನ ನವೋದಯ ಕಾಲದ ರಮ್ಯ ಕವಿಗಳ(Romantic Poets) ಪ್ರಭಾವಕ್ಕೊಳಗಾಗಿ 'ಬಿಗಿನರ್ಸ್ ಮ್ಯೂಸ್'(Beginner's Muse) ಎಂಬ ಆರು ಕವನಗಳ ಕವನ ಸಂಕಲನವನ್ನು ೧೯೨೨ರಲ್ಲಿ ರಚಿಸಿದರು. ನಂತರ ಜೇಮ್ಸ್ ಕಸಿನ್‍ರವರ ಸಲಹೆಯಂತೆ ಕನ್ನಡದಲ್ಲಿಯೇ ಕೃತಿ ರಚನೆಯಲ್ಲಿ ತೊಡಗಿದರು.
ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಕನ್ನಡದಲ್ಲಿ ೮೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
'ಶ್ರೀರಾಮಾಯಣ ದರ್ಶನಂ' ಇವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ. ಈ ಮಹಾಕಾವ್ಯಕ್ಕೆ ಮೂಲ ಆಕರಗ್ರಂಥ ವಾಲ್ಮೀಕಿ ರಾಮಾಯಣವಾದರು ಇದರಲ್ಲಿ ಬರುವ ಸನ್ನಿವೇಶಗಳು, ಪತ್ರಗಳ ಚಿತ್ರಣ ವಿಭಿನ್ನವಾಗಿ ಮೂಡಿಬಂದಿದೆ.
ಈ ಕೃತಿಯು ಕುವೆಂಪುರವರ ಒಂಬತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿದೆ. ಇದನ್ನು ಅವರು ತಮ್ಮದೇ ಆದ ವಿಶಿಷ್ಟ ಛಂಧಸ್ಸಿನಲ್ಲಿ ರೂಪುಗೊಳಿಸಿದ್ದಾರೆ.
ಕುವೆಂಪು ಅವರ ಕೆಲವು ಕವಿತೆಗಳು ಇಲ್ಲಿವೆ
ಸಂಕ್ಷಿಪ್ತ ಪರಿಚಯ
ಕಾವ್ಯನಾಮ |
ಕುವೆಂಪು, ಕಿಶೋರ ಚಂದ್ರವಾಣಿ |
ನಿಜನಾಮ |
ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ |
ಜನನ |
೧೯೦೪ ಡಿಸೆಂಬರ್ ೨೯ |
ಮರಣ |
೧೯೯೪ ನವೆಂಬರ್ ೧೦ |
ತಂದೆ |
ವೆಂಕಟಪ್ಪ |
ತಾಯಿ |
ಸೀತಮ್ಮ |
ಜನ್ಮ ಸ್ಥಳ |
ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ |
ಪತ್ನಿ |
ಹೇಮಾವತಿ |
ಕುವೆಂಪು ಅವರು ಸಾಹಿತ್ಯದ ಎಲ್ಲಾ ಬಗೆಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಕೃತಿಗಳು ಈ ಕೆಳಕಂಡಂತಿವೆ.
ಕಾವ್ಯ
೧. |
ಬಿಗಿನರ್ಸ್ ಮ್ಯೂಸ್(Beginner's Muse) |
1922 |
೨. |
ಅಮಲನಕಥೆ |
1924 |
೩. |
ಹಾಳೂರು |
೧೯೨೪ |
೪. |
ಕೊಳಲು |
೧೯೩೦ |
೫. |
ಪಾಂಚಜನ್ಯ |
೧೯೩೩ |
೬. |
ಕಲಾಸುಂದರಿ |
೧೯೩೪ |
೭. |
ಚಿತ್ರಾಂಗದಾ |
೧೯೩೬ |
೮. |
ಕಥನ ಕವನಗಳು |
೧೯೩೭ |
೯. |
ನವಿಲು |
೧೯೪೩ |
೧೦. |
ಕೊಗಿಲೆ ಮತ್ತು ಸೋವಿಯತ್ ರಷ್ಯಾ |
೧೯೪೪ |
೧೧. |
ಅಗ್ನಿಹಂಸ |
೧೯೪೬ |
೧೨. |
ಕಿಂಕಿಣಿ |
೧೯೪೬ |
೧೩. |
ಕೃತ್ತಿಕೆ |
೧೯೪೬ |
೧೪. |
ಪಕ್ಷಿಕಾಶಿ |
೧೯೪೬ |
೧೫ |
ಪ್ರೇಮ ಕಾಶ್ಮೀರ |
೧೯೪೬ |
೧೬ |
ಶ್ರೀ ಸ್ವಾತಂತ್ರ್ಯೋದಯ ಮಹಾಪ್ರಗಾಥಾ |
೧೯೪೭ |
೧೭ |
ಷೋಡಶಿ |
೧೯೪೭ |
೧೮ |
ಬಾಪೂಜಿಗೆ ಬಾಷ್ಪಾಂಜಲಿ |
೧೯೪೮ |
೧೯ |
ಶ್ರೀ ರಾಮಾಯ ದರ್ಶನಂ |
೧೯೪೯ |
೨೦ |
ಚಂದ್ರಮಂಚಕೆ ಬಾ ಚಕೋರಿ |
೧೯೫೪ |
೨೧ |
ಅಕ್ಷು ಗಂಗೋತ್ರಿ |
೧೯೫೭ |
೨೨ |
ಅನಿಕೇತನ |
೧೯೬೨ |
೨೩ |
ಅನುತ್ತರಾ |
೧೯೬೫ |
೨೪ |
ಮಂತ್ರಾಕ್ಷತೆ |
೧೯೬೬ |
೨೫ |
ಕದರಡಕೆ |
೧೯೬೭ |
೨೬ |
ಕುಟೀಚಕ |
೧೯೬೭ |
೨೭ |
ಪ್ರೇತಕ್ಯೂ |
೧೯೬೭ |
ನಾಟಕ
೧ |
ಯಮನ ಸೋಲು (ಪ್ರಥಮ ಪ್ರಕಟಿತ ನಾಟಕ) |
೧೯೨೮ |
೨ |
ಜಲಗಾರ |
೧೯೨೮ |
೩ |
ಬಿರುಗಾಳಿ |
೧೯೩೦ |
೪ |
ಮಹಾರಾತ್ರಿ |
೧೯೩೧ |
೫ |
ಶ್ಮಶಾನ ಕುರುಕ್ಷೇತ್ರಂ |
೧೯೩೧ |
೬ |
ವಾಲ್ಮೀಕಿಯ ಭಾಗ್ಯ |
೧೯೩೧ |
೭ |
ರಕ್ತಾಕ್ಷಿ |
೧೯೩೨ |
೮ |
ಶೂದ್ರ ತಪಸ್ವಿ |
೧೯೪೪ |
೯ |
ಬೆರಳ್‍ಗೆ ಕೊರಳ್ |
೧೯೪೭ |
೧೦ |
ಬಲಿದಾನ |
೧೯೪೮ |
೧೧ |
ಚಂದ್ರಹಾಸ |
೧೯೬೩ |
ಕಾದಂಬರಿ, ಕಥೆ, ಚಿತ್ರ
೧ |
ಮಲೆನಾಡಿನ ಚಿತ್ರಗಳು |
೧೯೩೩ |
೨ |
ಕಾನೂರು ಹೆಗ್ಗಡತಿ |
೧೯೩೬ |
೩ |
ಸಂನ್ಯಾಸಿ ಮತ್ತು ಇತರ ಕಥೆಗಳು |
೧೯೩೬ |
೪ |
ನನ್ನ ದೇವರು ಮತ್ತು ಇತರ ಕಥೆಗಳು |
೧೯೪೦ |
೫ |
ಮಲೆಗಳಲ್ಲಿ ಮದುಮಗಳು |
೧೯೬೭ |
ಶಿಶು ಸಾಹಿತ್ಯ
೧ |
ಮೋಡಣ್ಣನ ತಮ್ಮ |
೧೯೨೬ |
೨ |
ಬೊಮ್ಮನಹಳ್ಳಿಯ ಕಿಂದರಿಜೋಗಿ |
೧೯೨೮ |
೩ |
ನನ್ನ ಗೋಪಾಲ |
೧೯೩೦ |
೪ |
ನನ್ನ ಮನೆ |
೧೯೪೬ |
೫ |
ಮರಿ ವಿಜ್ಞಾನಿ |
೧೯೪೭ |
೬ |
ಮೇಘಪುರ |
೧೯೪೭ |
ಭಾಷಣ ಮತ್ತು ವಿಮರ್ಶೆ
೧ |
ಸಾಹಿತ್ಯ ಪ್ರಚಾರ |
೧೯೩೦ |
೨ |
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ |
೧೯೪೪ |
೩ |
ಕಾವ್ಯ ವಿಹಾರ |
೧೯೪೭ |
೪ |
ತಪೋನಂದನ |
೧೯೫೦ |
೫ |
ವಿಭೂತಿ ಪೂಜೆ |
೧೯೫೩ |
೬ |
ವಿಶ್ವವಿದ್ಯಾನಿಲಯದ ಪ್ರಸಾರಾಂಗ |
೧೯೫೯ |
೭ |
ದ್ರೌಪದಿಯ ಶ್ರೀಮುಡಿ |
೧೯೬೦ |
೮ |
ರಸೋ ವೈಸಃ |
೧೯೬೨ |
೯ |
ಷಷ್ಟಿನಮನ |
೧೯೬೪ |
ಅನುವಾದ
೧ |
ವೇದಾಂತ |
೧೯೩೪ |
೨ |
ಜನಪ್ರೀಯ ವಾಲ್ಮೀಕಿ ರಾಮಾಯಣ |
೧೯೫೦ |
೩ |
ಗುರುವಿನೊಡನೆ ದೇವರಡಿಗೆ |
೧೯೫೪ |
ಜೀವನ ಚರಿತ್ರೆ
೧ |
ಸ್ವಾಮಿ ವಿವೇಕಾನಂದ |
೧೯೩೨ |
೨ |
ಶ್ರೀ ರಾಮಕೃಷ್ಣ ಪರಮಹಂಸ |
೧೯೩೪ |
ಪ್ರಶಸ್ತಿ, ಪುರಸ್ಕಾರ, ಗೌರವ
ಕುವೆಂಪುರವರಿಗೆ ಸಂದ ಪ್ರಶಸ್ತಿಗಳು, ಗೌರವಗಳು ಅನೇಕ. ಅದರಲ್ಲಿ ಪ್ರಮುಖವಾದವು ಇಲ್ಲಿವೆ.
೧೯೫೫ |
'ಶ್ರೀರಾಮಾಯಣ ದರ್ಶನಂ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
೧೯೫೬ |
ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. |
೧೯೫೮ |
ಪದ್ಮಭೂಷಣ |
೧೯೬೪ |
ರಾಷ್ಟ್ರಕವಿ ಪುರಸ್ಕಾರ |
೧೯೬೬ |
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. |
೧೯೬೮ |
'ಶ್ರೀರಾಮಾಯಣ ದರ್ಶನಂ' ಕೃತಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ |
೧೯೬೬ |
ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. |
೧೯೭೯ |
ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್ |
೧೯೮೮ |
ಪಂಪ ಪ್ರಶಸ್ತಿ |
೧೯೮೯ |
ಪದ್ಮವಿಭೂಷಣ |
೧೯೯೨ |
ಕರ್ನಾಟಕ ರತ್ನ |
|
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ |
|
ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ) |
೨೦೧೫ |
ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ ೨೯ ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿದೆ |
ಅಧ್ಯಕ್ಷತೆ, ಇತ್ಯಾದಿ
೧೯೨೮ |
ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
೧೯೫೭ |
39ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
|
ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. |
೧೯೮೫ |
ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು |