# ಉತ್ತರ ಕರ್ನಾಟಕ North Karnataka
ಜ್ಞಾನಕೋಶ
1ಧಾರವಾಡ ಜಿಲ್ಲೆ
ಧಾರವಾಡ ಜಿಲ್ಲೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ. ಇದಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದೆ.
ಧಾರವಾಡ ಎಂದಾಕ್ಷಣ ನೆನಪಿಗೆ ಬರುವುದು ಹಾಲಿನಿಂದ ಮಾಡಲ್ಪಡುವ ಸಿಹಿ ತಿನಿಸು - "ಧಾರವಾಡ ಪೇಡ"
ಧಾರವಾಡ ಶಬ್ಧದ ಅರ್ಥ, ಸುಧೀರ್ಘ ಪ್ರವಾಸದಲ್ಲಿ ಪಡೆಯುವ ಸಣ್ಣ ವಿಶ್ರಾಮ ಅಥವಾ ಸಣ್ಣ ವಿಶ್ರಾಂತಿಧಾಮ ಆಗಿದೆ. ಮೂಲತಃ ಧಾರವಾಡ ಶಬ್ಧವು ಸಂಸ್ಕೃತದ "ದ್ವಾರವಾಟ" ಶಬ್ದದಿಂದ ಬಂದಿದೆ. ಸಂಸ್ಕೃತದಲ್ಲಿ "ದ್ವಾರ" ಎಂದರೆ "ಬಾಗಿಲು" ಮತ್ತು "ವಾಟ" ಎಂದರೆ "ಊರು". ಬಹಳ ಕಾಲದಿಂದಲೂ ಧಾರವಾಡವು ಮಲೆನಾಡು ಮತ್ತು ಬಯಲು ಪ್ರದೇಶಗಳಿಗೆ ರಹದಾರಿಯಾಗಿರುವುದರಿಂದ ಈ ಹೆಸರು ಸೂಕ್ತವಾಗಿದೆ.
ದಿನ ವಿಶೇಷ ಘಟನೆಗಳು
2ಬಸವರಾಜ ಬೊಮ್ಮಾಯಿ ಅವರಿಂದ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ
ಜುಲೈ 20, 2021 ರಂದು, ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಉತ್ತರ ಕರ್ನಾಟಕದ, ತೀವ್ರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು. ಈ ಭೇಟಿಯು, ಅವರ ನಾಯಕತ್ವವನ್ನು, ಮುನ್ನೆಲೆಗೆ ತಂದಿತು.
ಮಹದಾಯಿ ನದಿ ವಿವಾದ: ಕರ್ನಾಟಕದಲ್ಲಿ ಪ್ರತಿಭಟನೆಗಳು
ಜುಲೈ 25, 2018 ರಂದು, ಮಹದಾಯಿ ನದಿ ನೀರು ಹಂಚಿಕೆ ವಿವಾದದ ಕುರಿತು, ನ್ಯಾಯಾಧಿಕರಣದ ತೀರ್ಪು ಸಮೀಪಿಸುತ್ತಿದ್ದಂತೆ, ಉತ್ತರ ಕರ್ನಾಟಕದಾದ್ಯಂತ ರೈತರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗಳನ್ನು ತೀವ್ರಗೊಳಿಸಿದವು.