ಕನ್ನಡ ರಾಜ್ಯೋತ್ಸವ ಮಾಸಾಚರಣೆ — ನವೆಂಬರ್

ಕನ್ನಡ ಸಂಭ್ರಮ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಧಕರನ್ನು ಗೌರವಿಸುವ ವಿಶೇಷ ಪುಟ.

೩೦ ದಿನಗಳು — ೩೦ ಮಹನೀಯರು

ನವೆಂಬರ್ ೧ ರಿಂದ ೩೦ ರವರೆಗೆ ಪ್ರತಿದಿನ ಒಬ್ಬೊಬ್ಬ ಸಾಧಕರ ಚಿತ್ರ ಹಾಗೂ ಪರಿಚಯ ಅನಾವರಣಗೊಳ್ಳಲಿದೆ.

ಅನಾವರಣ: 17 / ೩೦
ಕುವೆಂಪು
ದಿನ 1
ಸಾಹಿತ್ಯ

ಕುವೆಂಪು

ರಾಷ್ಟ್ರಕವಿ, ಪ್ರಥಮ ಜ್ಞಾನಪೀಠ ಪುರಸ್ಕೃತರು

ಕನ್ನಡದ ಮೊದಲ ರಾಷ್ಟ್ರಕವಿ ಹಾಗೂ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. "ಜಯ ಭಾರತ ಜನನಿಯ ತನುಜಾತೆ" ನಾಡಗೀತೆಯ ಕರ್ತೃ.

ಜ್ಞಾನಕೋಶ ಲೇಖನ
ಡಾ. ರಾಜ್‌ಕುಮಾರ್
ದಿನ 2
ಕಲೆ-ಸಿನಿಮಾ

ಡಾ. ರಾಜ್‌ಕುಮಾರ್

ನಟ ಸಾರ್ವಭೌಮ, ಗಾನ ಗಂಧರ್ವ, ಕರ್ನಾಟಕ ರತ್ನ

ಕನ್ನಡ ಚಿತ್ರರಂಗದ ಮೇರು ನಟ, ಗಾನ ಗಂಧರ್ವ ಹಾಗೂ ಕನ್ನಡಿಗರ ಅಸ್ಮಿತೆಯ ಪ್ರತೀಕ.

ಜ್ಞಾನಕೋಶ ಲೇಖನ
ಸರ್ ಎಂ. ವಿಶ್ವೇಶ್ವರಯ್ಯ
ದಿನ 3
ವಿಜ್ಞಾನ & ತಂತ್ರಜ್ಞಾನ

ಸರ್ ಎಂ. ವಿಶ್ವೇಶ್ವರಯ್ಯ

ಭಾರತ ರತ್ನ, ಆಧುನಿಕ ಕರ್ನಾಟಕದ ಶಿಲ್ಪಿ

ಖ್ಯಾತ ಎಂಜಿನಿಯರ್, ಮೈಸೂರಿನ ದಿವಾನರು ಹಾಗೂ ಕೈಗಾರಿಕಾ ಮತ್ತು ನೀರಾವರಿ ಕ್ರಾಂತಿಯ ಹರಿಕಾರ.

ಜ್ಞಾನಕೋಶ ಲೇಖನ
ಕಿತ್ತೂರು ರಾಣಿ ಚೆನ್ನಮ್ಮ
ದಿನ 4
ಇತಿಹಾಸ

ಕಿತ್ತೂರು ರಾಣಿ ಚೆನ್ನಮ್ಮ

ಪ್ರಥಮ ಸ್ವಾತಂತ್ರ್ಯ ಯೋಧೆ

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಶಸ್ತ್ರ ಹಿಡಿದು ಹೋರಾಡಿದ ಕಿತ್ತೂರಿನ ಧೀರ ರಾಣಿ.

ಜ್ಞಾನಕೋಶ ಲೇಖನ
ಜಗಜ್ಯೋತಿ ಬಸವೇಶ್ವರ
ದಿನ 5
ಸಮಾಜ ಸುಧಾರಣೆ

ಜಗಜ್ಯೋತಿ ಬಸವೇಶ್ವರ

ಕಾಯಕವೇ ಕೈಲಾಸ ಎಂದ ವಿಶ್ವಗುರು

12ನೇ ಶತಮಾನದ ಶರಣ ಕ್ರಾಂತಿಯ ನಾಯಕ, ಅನುಭವ ಮಂಟಪದ ಸ್ಥಾಪಕರು ಮತ್ತು ವಚನಕಾರರು.

ಜ್ಞಾನಕೋಶ ಲೇಖನ
ದ.ರಾ. ಬೇಂದ್ರೆ
ದಿನ 6
ಸಾಹಿತ್ಯ

ದ.ರಾ. ಬೇಂದ್ರೆ

ವರಕವಿ, ನಾದಬ್ರಹ್ಮ, ಜ್ಞಾನಪೀಠ ಪುರಸ್ಕೃತರು

ಕನ್ನಡದ ನಾದಬ್ರಹ್ಮ, ಭಾವಗೀತೆಗಳ ಮಾಂತ್ರಿಕ. "ನಾಕುತಂತಿ" ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು.

ಜ್ಞಾನಕೋಶ ಲೇಖನ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ದಿನ 7
ಇತಿಹಾಸ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಅಪ್ರತಿಮ ಸ್ವಾತಂತ್ರ್ಯ ಸೇನಾನಿ

ಕಿತ್ತೂರು ಸಂಸ್ಥಾನದ ನಿಷ್ಠಾವಂತ ದಂಡನಾಯಕ ಹಾಗೂ ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿವೀರ.

ಜ್ಞಾನಕೋಶ ಲೇಖನ
ಒನಕೆ ಓಬವ್ವ
ದಿನ 8
ಇತಿಹಾಸ

ಒನಕೆ ಓಬವ್ವ

ಚಿತ್ರದುರ್ಗದ ಧೀರೆ

ಹೈದರಾಲಿ ಸೈನ್ಯವನ್ನು ಒನಕೆಯೊಂದರಿಂದಲೇ ಹಿಮ್ಮೆಟ್ಟಿಸಿದ ಚಿತ್ರದುರ್ಗ ಕೋಟೆಯ ಅಪ್ರತಿಮ ವೀರವನಿತೆ.

ಜ್ಞಾನಕೋಶ ಲೇಖನ
ಶಿವರಾಮ ಕಾರಂತ
ದಿನ 9
ಸಾಹಿತ್ಯ & ಸಂಸ್ಕೃತಿ

ಶಿವರಾಮ ಕಾರಂತ

ಕಡಲತೀರದ ಭಾರ್ಗವ, ಜ್ಞಾನಪೀಠ ಪುರಸ್ಕೃತರು

ಸಾಹಿತಿ, ಪರಿಸರವಾದಿ, ಯಕ್ಷಗಾನ ಪುನರುಜ್ಜೀವಕ ಮತ್ತು ಬಹುಮುಖ ಪ್ರತಿಭೆಯ "ನಡೆದಾಡುವ ವಿಶ್ವಕೋಶ".

ಜ್ಞಾನಕೋಶ ಲೇಖನ
ಪುರಂದರದಾಸರು
ದಿನ 10
ಸಂಗೀತ & ಭಕ್ತಿ

ಪುರಂದರದಾಸರು

ಕರ್ನಾಟಕ ಸಂಗೀತದ ಪಿತಾಮಹ

ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಶಾಶ್ವತ ಸ್ವರೂಪ ನೀಡಿ ಸಾವಿರಾರು ಕೀರ್ತನೆಗಳನ್ನು ರಚಿಸಿದ ದಾಸಶ್ರೇಷ್ಠರು.

ಜ್ಞಾನಕೋಶ ಲೇಖನ
ಭಕ್ತ ಕನಕದಾಸರು
ದಿನ 11
ಸಾಹಿತ್ಯ & ತತ್ವ

ಭಕ್ತ ಕನಕದಾಸರು

ಸಂತ ಕವಿ, ದಾಸ ಸಾಹಿತ್ಯದ ದಿಗ್ಗಜ

ಜಾತಿ ಪದ್ಧತಿಯನ್ನು ಧಿಕ್ಕರಿಸಿ ಸಮಾನತೆ ಹಾಗೂ ಭಕ್ತಿಯ ಸಂದೇಶ ಸಾರಿದ ಮೇರು ತತ್ವಪದಕಾರರು.

ಜ್ಞಾನಕೋಶ ಲೇಖನ
ಆಲೂರು ವೆಂಕಟರಾವ್
ದಿನ 12
ಏಕೀಕರಣ & ಇತಿಹಾಸ

ಆಲೂರು ವೆಂಕಟರಾವ್

ಕರ್ನಾಟಕ ಏಕೀಕರಣದ ಕುಲಪುರೋಹಿತರು

"ಕರ್ನಾಟಕ ಗತವೈಭವ" ಗ್ರಂಥದ ಮೂಲಕ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸಿ ಏಕೀಕರಣಕ್ಕೆ ಮುನ್ನುಡಿ ಬರೆದವರು.

ಜ್ಞಾನಕೋಶ ಲೇಖನ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ದಿನ 13
ಸಾಹಿತ್ಯ

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಸಣ್ಣ ಕತೆಗಳ ಜನಕ, ಜ್ಞಾನಪೀಠ ಪುರಸ್ಕೃತರು

ಕನ್ನಡ ಸಣ್ಣ ಕಥೆಗಳ ಜನಕ, "ಚಿಕ್ಕವೀರ ರಾಜೇಂದ್ರ" ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು.

ಜ್ಞಾನಕೋಶ ಲೇಖನ
ಶರಣೆ ಅಕ್ಕಮಹಾದೇವಿ
ದಿನ 14
ವಚನ & ಸಾಹಿತ್ಯ

ಶರಣೆ ಅಕ್ಕಮಹಾದೇವಿ

ವಚನ ಸಾಹಿತ್ಯದ ತೇಜಸ್ವಿ ಕವಯಿತ್ರಿ

ಚೆನ್ನಮಲ್ಲಿಕಾರ್ಜುನನ ಅಂಕಿತದಲ್ಲಿ ಅದ್ಭುತ ವಚನಗಳನ್ನು ರಚಿಸಿದ 12ನೇ ಶತಮಾನದ ಪ್ರಖರ ವೈರಾಗ್ಯಮೂರ್ತಿ.

ಜ್ಞಾನಕೋಶ ಲೇಖನ
ಡಿ.ವಿ. ಗುಂಡಪ್ಪ (ಡಿವಿಜಿ)
ದಿನ 15
ಸಾಹಿತ್ಯ & ತತ್ವಶಾಸ್ತ್ರ

ಡಿ.ವಿ. ಗುಂಡಪ್ಪ (ಡಿವಿಜಿ)

ಮಂಕುತಿಮ್ಮನ ಕಗ್ಗದ ಕರ್ತೃ, ಹಿರಿಯ ಪತ್ರಕರ್ತರು

ಕನ್ನಡದ ಭಗವದ್ಗೀತೆ ಎನಿಸಿದ "ಮಂಕುತಿಮ್ಮನ ಕಗ್ಗ"ದ ಕರ್ತೃ ಹಾಗೂ ಗೋಖಲೆ ಸಾರ್ವಜನಿಕ ಸಂಸ್ಥೆಯ ಸಂಸ್ಥಾಪಕರು.

ಜ್ಞಾನಕೋಶ ಲೇಖನ
ಬಿ.ಎಂ. ಶ್ರೀಕಂಠಯ್ಯ (ಬಿ.ಎಂ.ಶ್ರೀ)
ದಿನ 16
ಸಾಹಿತ್ಯ

ಬಿ.ಎಂ. ಶ್ರೀಕಂಠಯ್ಯ (ಬಿ.ಎಂ.ಶ್ರೀ)

ಕನ್ನಡ ಸಾಹಿತ್ಯ ನವೋದಯದ ಕಣ್ವ

"ಇಂಗ್ಲಿಷ್ ಗೀತಗಳು" ಮೂಲಕ ಕನ್ನಡ ಕಾವ್ಯಲೋಕದಲ್ಲಿ ನವೋದಯದ ರಂಗು ತಂದ ಸಾಹಿತ್ಯದ ಕಣ್ವ.

ಜ್ಞಾನಕೋಶ ಲೇಖನ
ಸಾಲುಮರದ ತಿಮ್ಮಕ್ಕ
ದಿನ 17
ಪರಿಸರ

ಸಾಲುಮರದ ತಿಮ್ಮಕ್ಕ

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತರು

ಕುದೂರಿನಿಂದ ಹುಲಿಕಲ್ ರಸ್ತೆಯುದ್ದಕ್ಕೂ ನೂರಾರು ಆಲದ ಮರಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದ ಜಗದ್ವಿಖ್ಯಾತ ಪರಿಸರ ರಾಯಭಾರಿ.

ಜ್ಞಾನಕೋಶ ಲೇಖನ
ದಿನ 18
ನವೆಂಬರ್ 18 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 19
ನವೆಂಬರ್ 19 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 20
ನವೆಂಬರ್ 20 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 21
ನವೆಂಬರ್ 21 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 22
ನವೆಂಬರ್ 22 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 23
ನವೆಂಬರ್ 23 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 24
ನವೆಂಬರ್ 24 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 25
ನವೆಂಬರ್ 25 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 26
ನವೆಂಬರ್ 26 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 27
ನವೆಂಬರ್ 27 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 28
ನವೆಂಬರ್ 28 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 29
ನವೆಂಬರ್ 29 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ
ದಿನ 30
ನವೆಂಬರ್ 30 ಅನಾವರಣಗೊಳ್ಳಲಿದೆ
ಸಾಧಕರ ಚಿತ್ರ ಅಡಗಿದೆ

ಮುಂದಿನ ವಿಶೇಷ ವಿಭಾಗಗಳು ಶೀಘ್ರದಲ್ಲೇ ಬರಲಿವೆ

ಕನ್ನಡ ಸಂಭ್ರಮ ಪುಟದಲ್ಲಿ ರಾಜ್ಯೋತ್ಸವದ ಇನ್ನಷ್ಟು ರೋಮಾಂಚಕ ವಿಭಾಗಗಳು ಹಾಗೂ ಸಂವಾದಾತ್ಮಕ ಅಂಶಗಳನ್ನು ಸೇರಿಸಲಾಗುತ್ತಿದೆ.