ವಿಷಯ ಟ್ಯಾಗ್ • 4 ವಿಷಯಗಳು

# ಕರ್ನಾಟಕ ರತ್ನ ಕರ್ನಾಟಕ ರತ್ನ

ಭಾಷಾ ಆಯ್ಕೆ / Display:

ಜ್ಞಾನಕೋಶ

3
ಕರ್ನಾಟಕ ರತ್ನ
karnataka

ಕರ್ನಾಟಕ ರತ್ನ

'ಕರ್ನಾಟಕ ರತ್ನ' ಕರ್ನಾಟಕ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.

ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.

ಡಾ. ರಾಜ್‌ಕುಮಾರ್
vyaktivichara

ಡಾ. ರಾಜ್‌ಕುಮಾರ್

ಡಾ. ರಾಜ್‌ಕುಮಾರ್ (ಮುತ್ತುರಾಜ) - ಕನ್ನಡ ಚಿತ್ರರಂಗದ 'ನಟ ಸಾರ್ವಭೌಮ', 'ಗಾನ ಗಂಧರ್ವ', ಮತ್ತು ಕೋಟ್ಯಂತರ ಕನ್ನಡಿಗರ ಪ್ರೀತಿಯ 'ಅಣ್ಣಾವ್ರು'.

ಕೇವಲ ಒಬ್ಬ ಶ್ರೇಷ್ಠ ನಟನಾಗಿ ಮಾತ್ರವಲ್ಲದೆ, ಕನ್ನಡಿಗರ ಸಾಂಸ್ಕೃತಿಕ ನಾಯಕನಾಗಿ, ಕನ್ನಡ ಭಾಷೆ-ನೆಲ-ಜಲದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತ ಮಹಾನ್ ಚೇತನ. ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಕನ್ನಡ ಸಿನೆಮಾ ರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದರು.

ಭಾರತ ಚಿತ್ರರಂಗದ ಪರಮೋಚ್ಛ ಗೌರವವಾದ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ಪ್ರಥಮ 'ಕರ್ನಾಟಕ ರತ್ನ' ಪ್ರಶಸ್ತಿ ಪುರಸ್ಕೃತರು.

ಡಾ. ಪುನೀತ್ ರಾಜ್‌ಕುಮಾರ್
vyaktivichara

ಡಾ. ಪುನೀತ್ ರಾಜ್‌ಕುಮಾರ್

ಡಾ. ಪುನೀತ್ ರಾಜ್‌ಕುಮಾರ್ (ಅಪ್ಪು) (೧೭ ಮಾರ್ಚ್ ೧೯೭೫ - ೨೯ ಅಕ್ಟೋಬರ್ ೨೦೨೧) - ಕನ್ನಡದ ಅಪ್ರತಿಮ ಸೂಪರ್‌ಸ್ಟಾರ್, ನಾಯಕ ನಟ, ಗಾಯಕ ಹಾಗೂ ಕೋಟ್ಯಂತರ ಕನ್ನಡಿಗರ ಪ್ರೀತಿಯ 'ಅಪ್ಪು'.

ಬಾಲನಟನಾಗಿ 'ಬೆಟ್ಟದ ಹೂವು' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದು, ನಾಯಕನಾಗಿ ಅಪ್ಪು, ಅಭಿ, ಅರಸು, ಮಿಲನ, ಜಾಕಿ, ರಾಜಕುಮಾರ, ಯುವರತ್ನ ಮುಂತಾದ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದರು.

ಸಾವಿನ ನಂತರವೂ ತಮ್ಮ ನೇತ್ರದಾನ, ಶಕ್ತಿಧಾಮದ ಮೂಲಕ ಸಾವಿರಾರು ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಅನಾಥಾಶ್ರಮಗಳ ಪೋಷಣೆಯಂತಹ ನಿಸ್ವಾರ್ಥ ಸಮಾಜಸೇವೆಯಿಂದ ಕನ್ನಡಿಗರ ಹೃದಯದಲ್ಲಿ ಅಮರರಾಗಿ ಉಳಿದಿದ್ದಾರೆ. ಕರ್ನಾಟಕ ಸರ್ಕಾರ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ನೀಡಿ ಗೌರವಿಸಿದೆ.

ದಿನ ವಿಶೇಷ ಘಟನೆಗಳು

1
ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ
2022 ಸಂಸ್ಕೃತಿ

ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ

ನವೆಂಬರ್ 1, 2022 ರಂದು, ಕರ್ನಾಟಕ, ರಾಜ್ಯೋತ್ಸವದ, ದಿನ, ದಿವಂಗತ, ನಟ, ಪುನೀತ್, ರಾಜ್‌ಕುಮಾರ್ ಅವರಿಗೆ, ಮರಣೋತ್ತರವಾಗಿ, 'ಕರ್ನಾಟಕ, ರತ್ನ', ಪ್ರಶಸ್ತಿಯನ್ನು, ಪ್ರದಾನ, ಮಾಡಲಾಯಿತು.