ಕನ್ನಡ ನುಡಿ
menu
ಮುಖಪುಟ
ಚಿತ್ರಸೌರಭ
ಗೀತವಿಹಾರ
ಜ್ಞಾನಕೋಶ
ಜ್ಞಾನಕೋಶ
ವಿಭಾಗ: ಯಾತ್ರೆ ನಿವಾಸ
ಹಳೇಬೀಡು
ಕರ್ನಾಟಕದಲ್ಲಿ ಶಿಲ್ಪಕಲೆಗೆ ಹೆಸರಾಗಿರುವ, ಐತಿಹಾಸಿಕ ಸ್ಥಳ ಹಳೆಬೀಡು ಹಾಸನ ಜಿಲ್ಲೆಯಲ್ಲಿದೆ. ಹಳೇಬೀಡು ಹನ್ನೊಂದನೆಯ ಶತಮಾನದಲ್ಲಿ ಹೊಯ್ಸಳ ದೊರೆಗಳ ರಾಜಧಾನಿಯಾಗಿದ್ದು ದೋರಸಮುದ್ರ ಎಂಬ ಹೆಸರನ್ನು ಪಡೆದಿತ್ತು ಮತ್ತು ಧನಧಾನ್ಯದಿಂದ ತುಂಬಿ ಸಮೃದ್ಧವಾಗಿತ್ತು. ಮಹಮದೀಯ ದಂಡನಾಯಕನಾಗಿದ್ದ ಮಲ್ಲಿಕಾಫರನು ದಾಳಿ ಮಾಡಿ ಅಲ್ಲಿದ್ದ ಐಶ್ವರ್ಯವನ್ನೆಲ್ಲಾ ದೊಚಿಕೊಂಡು ಹೋದನು. ಇದು ಮತ್ತೆ ಮತ್ತೆ ಮಹಮದೀಯರ ದಾಳಿಗೆ ಬಲಿಯಾಗಿ ಹಳೇಬೀಡು ಎಂಬ ಹೆಸರಾಯಿತು.
#
ಇತಿಹಾಸ
#
ಐತಿಹಾಸಿಕ
#
ಪುರಾಣ
#
ವಾಸ್ತುಶಿಲ್ಪಿ
ಬೇಲೂರು
ನಮ್ಮ ನಾಡಿನ ಜ್ಞಾನಭಂಡಾರ, ಲಲಿತ ಕಲೆಗಳ ತೌರೂರು, ಸಂಸ್ಕೃತಿಯ ನೆಲೆವೀಡಾದ ಬೇಲೂರು ಹಾಸನದಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಈ ಊರಿಗೆ ವೇಲಾಪುರ, ವೇಲೂರು, ಬೇಲೂರು ಮುಂತಾದ ಹೆಸರುಗಳಿವೆ. ಇಲ್ಲಿಯ ಚನ್ನಕೇಶವ ದೇವಾಲಯವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನು ಹನ್ನೆರಡನೆಯ ಶತಮಾನದಲ್ಲಿ ಕಟ್ಟಿಸಿದನು.
#
ಇತಿಹಾಸ
#
ಐತಿಹಾಸಿಕ
#
ಪುರಾಣ
#
ಪ್ರಯಾಣ
#
ವಾಸ್ತುಶಿಲ್ಪಿ
ಶ್ರೀ ಕ್ಷೇತ್ರ ಶೃಂಗೇರಿ
ತುಂಗಾ ನದಿಯ ದಂಡೆಯ ಮೇಲಿರುವ ಶ್ರಂಗೇರಿಯು ಪವಿತ್ರ ಯಾತ್ರಾಸ್ಥಳ. ರಾಮಾಯಣ ಕಾಲದ ವಿಭಾಂಡಕ ಮುನಿ ಹಾಗೂ ಆತನ ಮಗ ಋಷ್ಯಶೃಂಗ ಇಲ್ಲಿ ವಾಸವಾಗಿದ್ದರಂತೆ. ಅದರಿಂದಾಗಿ ಈ ಊರಿಗೆ ಋಷ್ಯಶೃಂಗಗಿರಿ ಎಂಬ ಹೆಸರು ಬಂದು ಕಾಲಕ್ರಮೇಣ ಅದೇ ಶೃಂಗಗಿರಿ ಹಾಗೂ ಶೃಂಗೇರಿ ಆಯಿತೆಂಬ ಪ್ರತೀತಿಯಿದೆ.
#
ಸ್ಥಳ
#
ಪ್ರಯಾಣ
#
ಐತಿಹಾಸಿಕ
#
ಇತಿಹಾಸ
ತಿಂಮನ ಅರ್ಥಕೋಶ
ಭಿಕ್ಷುಕ
ದುಡಿಯದೆ ತಿನ್ನುವ ಪ್ರತಿಯೊಬ್ಬ ಶ್ರೀಮಂತನೂ ಭಿಕ್ಷುಕನೇ.
ಗೀತವಿಹಾರ
ನಾಯಿ ಮರಿ ನಾಯಿ ಮರಿ
ಅಲ್ಲಿದೆ ನಮ್ಮ ಮನೆ
ಜಾಲಿಯ ಮರದಂತೆ
ಈತನೀಗ ವಾಸುದೇವನು
ನಮ್ಮಮ್ಮ ಶಾರದೆ
ಮತ್ತಷ್ಟು