ಶರಣು ಶರಣುವಯ್ಯ ಗಣನಾಯ್ಕ

ನಮ್ಮ ಕರುಣಾದಿಂದಲಿ ಕಾಯೋ ಗಣನಾಯ್ಕ

ಎಳ್ಳುಂಡೆ ಜೇನುತುಪ್ಪ ಗಣನಾಯ್ಕ

ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ

ಉಸಲಿ ಕಾಯಿಕಡುಬು ಗಣನಾಯ್ಕ

ನಿಮಗೆ ತಪ್ಪಾದೆ ಒಪ್ಪಿಸುವೆ ಗಣನಾಯ್ಕ

ಗೊನೆಮೇಗ್ಲ ಬಾಳೆಹಣ್ಣು ಗಣನಾಯ್ಕ

ನಿಮಗೆ ಚಿಗುರೆಲೆ ಕಳಿ ಅಡ್ಕೆ ಗಣನಾಯ್ಕ

ಕೊಂಬೆಮೇಗ್ಲ ನಿಂಬೆಹಣ್ಣು ಗಣನಾಯ್ಕ

ನಿಮಗೆ ಜೋಡಿ ಇಡುಗಾಯಿ ಗಣನಾಯ್ಕ

ಕರ್ಪೂರ ಸಾಂಬ್ರಾಣಿ ಗಣನಾಯ್ಕ

ನಿಮ್ಗೆ ಮರುಗ ಮಲ್ಲಿಗೆ ಜಾಜಿ ಗಣನಾಯ್ಕ

ಮೂಷಿಕ ವಾಹನ ಗಣನಾಯ್ಕ

ನಮ್ಮ ಶಿವನ ಕುಮಾರನಯ್ಯ ಗಣನಾಯ್ಕ

ಹೆಂಡ್ರಿಲ್ಲ ಮಕ್ಕಳಿಲ್ಲ ಗಣನಾಯ್ಕ

ನಮ್ಮ ಧ್ಯಾನಕ್ಕೆ ಒಲಿಯಯ್ಯ ಗಣನಾಯ್ಕ

ಜಾನಪದಕವಿತೆ

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail