ಭಾವ ಗೀತೆಗಳು

ಬೆಣ್ಣೆ ಕದ್ದ ನಮ್ಮ ಕೃಷ್ಣಾ

ಬೆಣ್ಣೆ ಕದ್ದ ನಮ್ಮ ಕೃಷ್ಣಾ ಬೆಣ್ಣೆ ಕದ್ದನಮ್ಮ

ಬೆಣ್ಣೆಯ ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ

ಬಿಂದಿಗೆ ಬಿದ್ದು ಸಿಡಿಯಲು ಸದ್ದು

ಬೆಚ್ಚಿದ ರಾಧೆಯ ಗಂಡನಮ್ಮ

ತಾಯಿ ಬಂದಳೋಡಿ ಕಳ್ಳನ ಕಣ್ಣಿನಲ್ಲಿ ಕೋಡಿ

ಕಣ್ಣಲಿ ಆಕೆ ಸಿಟ್ಟನು ತಾಳಿ ಸೊಂಟಕೆ ಕೈಯಿಟ್ಟು

ಆದಳು ಅರೆಚಣ ಭೀಕರ ತಾಳಿ ದುರುದುರು ಕಣ್ಬಿಟ್ಟು

ಹಣೆ ತುಂಬ ಕೆನ್ನೆಗೆ ಬೆಣ್ಣೆ ಮೆತ್ತಿಅ ಒರಟನ್ ನೋಟಕ್ಕೆ

ಇಳಿಯುತ ಕೋಪ ಅರಳಿತು ಕೆಂದುಟಿ ತುಂಟನ ಆಟಕ್ಕೆ

ತಪ್ಪಿದ ದಂಟಕೆ ನಿಟ್ಟುಸಿರೆಳೆದು ಬೆಣ್ಣೆಗಳಾ ನೀಲಾ

ತಟ್ಟನೆ ಅಳುವುದ ನಿಲ್ಲಿಸಿ ನಕ್ಕು ಬಾಯಗಲಿಸಿ ಬಾಲ

ಹರಡಿದ ಬೆಳದಿಂಗಳ ಜಾಲ ಅರಳಿದ ಬೆಳದಿಂಗಳ ಲಾಲ

ಅವನ ಅಕುಟಿಲ ಬೆಣ್ಣೆಯಂಥ ನಗು ಕಾಯಲಿ ಜಗದವರಾ

ಸಂತತ ನಗಿಸಲಿ ನಗದವರ

ಹಂಚಿಕೊಳ್ಳಿ: