ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ || ಪ ||
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಿಕ ವಾಹನ || ಅ.ಪ. ||
ನಿಟಿಲ ನೇತ್ರನ ದೇವಿಸುತನೆ
ನಾಗಭೂಷಣ ಪ್ರೀಯನೇ
ಕಟಿತಟಾಂಕಿತ ಕೋಮಲಾಂಗನೆ
ಕರ್ಣಕುಂಡಲ ಧಾರನೆ || 1 ||
ಬಟ್ಟ ಮುತ್ತಿನ ಹಾರಪದಕನೆ
ಬಾಹು ಹಸ್ತ ಚತುಷ್ಕನೇ
ಇಟ್ಟ ತೊಡುಗೆಯ ಹೇಮ ಕಂಕಣ
ಪಾಶ ಅಂಕುಶ ಧಾರನೆ || ೨ ||
ಕುಕ್ಷಿ ಮಹಾಲಂಬೋದರನೆ
ಇಕ್ಷು ಚಾಪನ ಗೆಲಿದನೇ
ಪಕ್ಷಿವಾಹನ ಶ್ರೀಪುರಂದರ
ವಿಠಲನ ನಿಜ ದಾಸನೆ || ೩ ||
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು
ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!
ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.