ಭಕ್ತಿಸುಧೆ

ರಾಮನಾಮ ಪಾಯಸಕ್ಕೆ

ರಾಮನಾಮ ಪಾಯಸಕ್ಕೆ

ಕೃಷ್ಣನಾಮ ಸಕ್ಕರೆ

ವಿಠಲನಾಮ ತುಪ್ಪವ ಬೆರೆಸಿ

ಬಾಯಿ ಚಪ್ಪರಿಸಿರೊ || ಪ ||

ಒಮ್ಮನ ಗೋಧಿಯ ತಂದು

ವೈರಾಗ್ಯ ಕಲ್ಲಲಿ ಬೀಸಿ

ಸುಮ್ಮನ ಸಜ್ಜಿಗೆಯ ತೆಗೆದು

ಸಣ್ಣ ಶಾವಿಗೆಯ ಹೊಸೆಯಿರೊ || 1 ||

ಹೃದಯವೆಂಬೊ ಪಾತ್ರೆಯೊಳಗೆ

ಭಾವವೆಂಬೊ ಎಸರು ಇಟ್ಟು

ಬುದ್ದಿ ಪಾಕ ಮಾಡಿ ಅನಿ

ರುದ್ಧ ಹರಿಯ ನೆನೆಯಿರೊ || ೨ ||

ಆನಂದ ಆನಂದವೆಂಬೊ

ತೇಗು ಬಂದ ಪರಿಯಲಿ

ಆನಂದಮೂರುತಿ ನಮ್ಮ

ಪುರಂದರವಿಠಲ ನೆನೆಯಿರೊ || ೩ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆವೃತ್ತಿ

ಇಂದಿನ ಕನ್ನಡ ಪದಬಂಧ ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಪದಬಂಧ ಹಾಗೂ ಪದ ಸರಪಳಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟ.