ಪ್ರಖ್ಯಾತ ಉರ್ದು ಕವಿ ಮತ್ತು ಬಾಲಿವುಡ್ ಗೀತರಚನೆಕಾರ ರಾಹತ್ ಇಂದೋರಿ ಅವರು ಜನವರಿ 1, 1950 ರಂದು ಇಂದೋರ್‌ನಲ್ಲಿ ಜನಿಸಿದರು. ಅವರ 'ಬುಲಾತಿ ಹೈ ಮಗರ್ ಜಾನೆ ಕಾ ನಹಿ' ಶಾಯರಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿತ್ತು. ಅವರು ತಮ್ಮ ಕವಿತೆಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು.