ನಗುವ ನಯನ

ಎಸ್. ಜಾನಕಿ, ಪಿ. ಬಿ. ಶ್ರೀನಿವಾಸ್ ಆರ್. ಎನ್. ಜಯಗೋಪಾಲ್ ಇಳೆಯರಾಜ

ನಗುವ ನಯನ ಮಧುರ ಮೌನ

ಮಿಡಿವ ಹೃದಯ ಇರೆ ಮಾತೇಕೆ

ಹೊಸ ಭಾಷೆ ಇದು ರಸ ಕಾವ್ಯವಿದು

ಇದ ಹಾಡಲು ಕವಿ ಬೇಕೆ || ಪ ||

ನಿನಗಾಗಿ ಹೇಳುವೆ ಕಥೆ ನೂರನು

ನಾನಿಂದು ನಗಿಸುವೆ ಈ ನಿನ್ನನು

ಇರುಳಲು ಕಾಣುವೆ ಕೀರು ನಗೆಯನು

ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು

ಜೊತೆಯಾಗಿ ನಡವೆ ನಾ ಮಳೆಯಲು

ಬಿಡದಂತೆ ಹಿಡಿವೆ ಈ ಕೈಯನು

ಗೆಳೆಯ ಜೊತೆಗೆ ಹಾರಿ ಬರುವೆ

ಭಾನ ಎಲ್ಲೆ ದಾಟಿ ನಲಿವೆ || ೧ ||

ಈ ರಾತ್ರಿ ಹಾಡೊ ಪಿಸುಮಾತಲ್ಲಿ

ನಾ ಕಂಡೆ ಇನಿದಾದ ಸವಿರಾಗವ

ನೀನಲ್ಲಿ ನಾನಿಲ್ಲಿ ಎಕಾಂತದೆ

ನಾ ಕಂಡೆ ನನ್ನದೆ ಹೊಸಲೊಕವ

ಈ ಸ್ನೆಹ ತಂದಿದೆ ಎದೆಯಲ್ಲಿ

ಎಂದೆಂದು ಅಳಿಸದ ರಂಗೋಲಿ

ಆಸೆ ಹೂವ ಹಾಸಿ ಕಾದೆ

ನಡೆ ನೀ ಕನಸ ಹೊಸಕಿ ಬಿಡದೆ || ೨ ||