ಯಾರಿಗೆ ಯಾರುಂಟು
ಗಾಳಿಗೋಪುರ ಘಂಟಸಾಲ
ಪುರಂದರದಾಸರು
ಟಿ. ಜಿ. ಲಿಂಗಪ್ಪ
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ || ಪ ||
ಬಾಯಾರಿತು ಎಂದು ಬಾವಿ ನೀರಿಗೆ ಪೋದೆ
ಬಾವಿ ಜಲಬತ್ತಿ ಬರಿದಾಯ್ತೋ ಹರಿಯೆ
ಬಿಸಿಲಾ ತಾಳದೆ ಮರದ ನೆರಳಿಗೆ ಪೋದೆ
ಮರ ಬಗ್ಗಿ ಶಿರದ ಮೇಲೆ ಒರಗಿತೊ ಹರಿಯೆ || 1 ||
ಅಡವಿಲಿ ಮನೆ ಮಾಡಿ ಗಿಡಕೆ ತೊಟ್ಟಿಲ ಕಟ್ಟಿದೆ
ತೊಟ್ಟಿಲಿನ ಶಿಶುವೆ ಮಾಯವಾಯಿತೊ ಹರಿಯೆ
ತಂದೆ ಶ್ರೀ ಪುರಂದರ ವಿಠಲ ನಾರಾಯಣ
ಮರೆಯದೆ ಎನ್ನನು ನೀನೆ ಸಲಹೊ ಹರಿಯೆ || ೨ ||
ಗಾಳಿಗೋಪುರ
ಚಿತ್ರ ನೋಡಿ