ಜಿ. ಎಸ್. ಶಿವರುದ್ರಪ್ಪ

G. S. Shivarudrappa

ಉತ್ಕೃಷ್ಟ ಕವಿಯಾಗಿ ಪ್ರಬುದ್ಧ ವಿಮರ್ಶಕರಾಗಿ, ಸಂಪಾದಕರಾಗಿ, ಉತ್ತಮ ಅಧ್ಯಾಪಕರಾಗಿ, ದಕ್ಷ ಆಡಳಿತಗಾರರಾಗಿ, ಸಂಘಟಕರಾಗಿ, ಕನ್ನಡದ ಹಿತರಕ್ಷಕರಾಗಿ, ಸ್ನೇಹ ಜೀವಿಯಾಗಿ, ಶಿಷ್ಯ ವತ್ಸಲರಾಗಿ, ಮಾನವತಾವಾದಿಯಾಗಿ ಬಾಳಿದ ಜಿ. ಎಸ್. ಶಿವರುದ್ರಪ್ಪ ನವರು ಕನ್ನಡದ ಹೆಮ್ಮೆಯ ಕವಿ.

ಇವರು ೧೩ ಕಾವ್ಯ ಸಂಕಲನಗಳನ್ನು, ಹದಿನಾರು ವಿಮರ್ಶೆ/ ಮೀಮಾಂಸೆ ಗ್ರಂಥಗಳನ್ನು, ನಾಲ್ಕು ಪ್ರವಾಸ ಕಥನಗಳನ್ನು, ಒಂದು ವ್ಯಕ್ತಿ ಚಿತ್ರವನ್ನು, ಹಲವಾರು ಸಂಪಾದಿತ ಗ್ರಂಥಗಳನ್ನು, ಅನುವಾದಗಳನ್ನು ಪ್ರಕಟಿಸಿದ್ದಾರೆ.

ಎ. ಆರ್. ಕೃಷ್ಣಶಾಸ್ತ್ರಿ, ಕುವೆಂಪು, ಡಿ. ಎಲ್. ನರಸಿಂಹಾಚಾರ್, ಜಿ. ಪಿ. ರಾಜರತ್ನಂ, ತೀ. ನಂ. ಶ್ರೀಕಂಠಯ್ಯ, ತ. ಸು. ಶಾಮರಾಯರಂಥ ಗುರುಗಳ ಮಾರ್ಗದರ್ಶನ ಶಿವರುದ್ರಪ್ಪನವರು ಕವಿಯಾಗಿ, ಸಂಘಟನಕಾರರಾಗಿ, ಉತ್ತಮ ಅಧ್ಯಾಪಕರಾಗಿ ರೂಪುಗೊಳ್ಳು ವಲ್ಲಿ ಸಹಕಾರಿಯಾಯಿತು.

ಜಿ. ಎಸ್. ಶಿವರುದ್ರಪ್ಪ ಅವರ ಕೆಲವು ಕವಿತೆಗಳು ಇಲ್ಲಿವೆ

ಸಂಕ್ಷಿಪ್ತ ಪರಿಚಯ

ಕಾವ್ಯನಾಮ ಜಿ.ಎಸ್.ಎಸ್.
ನಿಜನಾಮ ಜಿ. ಎಸ್. ಶಿವರುದ್ರಪ್ಪ
ಜನನ ೧೯೨೬ ಫೆಬ್ರವರಿ ೭
ಮರಣ ೨೦೧೩ ಡಿಸೆಂಬರ್ 23
ತಂದೆ ಶಾಂತವೀರಪ್ಪ
ತಾಯಿ ವೀರಮ್ಮ
ಜನ್ಮ ಸ್ಥಳ ಶಿಕಾರಿಪುರ, ಶಿವಮೊಗ್ಗ ಜಿಲ್ಲೆ
ಪತ್ನಿ ರುದ್ರಾಣಿ

ಕಾವ್ಯ

೧. ಸಾಮಗಾನ ೧೯೫೧
೨. ಚೆಲುವು-ಒಲವು ೧೯೫೩
೩. ದೇವ ಶಿಲ್ಪ ೧೯೫೬
೪. ದೀಪದ ಹೆಜ್ಜೆ ೧೯೫೯
೫. ಕಾರ್ತೀಕ ೧೯೬೧
೬. ತೀರ್ಥವಾಣಿ 1961
೭. ಅನಾವರಣ ೧೯೬೩
೮. ತೆರೆದ ದಾರಿ ೧೯೬೬
೯. ಗೋಡೆ ೧೯೭೨
೧೦. ಕಾಡಿನ ಕತ್ತಲಲ್ಲಿ ೧೯೮೧
೧೧. ಪ್ರೀತಿ ಇಲ್ಲದ ಮೇಲೆ ೧೯೮೨
೧೨. ಚಕ್ರಗತಿ ೧೯೯೨
೧೩. ವ್ಯಕ್ತ ಮಧ್ಯ ೧೯೯೯
೧೪. ಸಮಗ್ರ ಕಾವ್ಯ ೧೯೮೭

ವಿಮರ್ಶಾ ಗ್ರಂಥಗಳು

೧. ಕಾವ್ಯ ಮೀಮಾಂಸೆ: ವಿಮರ್ಶೆಯ ಪೂರ್ವ ಪಶ್ಚಿಮ ೧೯೫೧
೨. ಪರಿಶೀಲನೆ ೧೯೬೭
೩. ಗತಿಬಿಂಬ ೧೯೬೯
೪. ಪ್ರತಿಕ್ರಿಯೆ ೧೯೮೨
5. ನವೋದಯ ೧೯೭೬
6. ಕನ್ನಡ ಸಾಹಿತ್ಯ ಸಮೀಕ್ಷೆ ೧೯೭೬
೭. ಅನುರಣನ ೧೯೭೮
೮. ಹಿನ್ನೆಲೆ ೧೯೮೨
೯. ಬೆಡಗು ೧೯೮೯
೧೦. ವಿಸ್ತರಣ ೧೯೯೫
೧೧. ಸೌಂದರ್ಯ ಸಮೀಕ್ಷೆ ೧೯೬೫
೧೨. ಮಹಾಕಾವ್ಯದ ಸ್ವರೂಪ ೧೯೭೬
೧೩. ಕಾವ್ಯಾರ್ಥ ಚಿಂತನ ೧೯೮೦
೧೪. ಕನ್ನಡ ಕವಿಗಳ ಕಾವ್ಯ ಕಲ್ಪನೆ ೧೯೮೦
೧೫. ಹೊಸ ಕನ್ನಡದ ಕವಿತೆಗಳಲ್ಲಿ ಕಾವ್ಯ ಚಿಂತನೆ - ಕೆಲವು ಪ್ರತಿಕ್ರಿಯೆಗಳು ೧೯೯೧
೧೬. ಸಮಗ್ರ ಗದ್ಯ ೧,೨,

ಪ್ರಶಸ್ತಿ / ಪುರಸ್ಕಾರ

೧೯೭೪ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ("ಮಾಸ್ಕೋದಲ್ಲಿ ೨೨ ದಿನ" ಪ್ರವಾಸ ಕಥನಕ್ಕೆ)
೧೯೮೨ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ
೧೯೮೪ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1992 ದಾವಣಗೆರೆಯಲ್ಲಿ ನಡೆದ ೬೧ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
1997 ಪ್ರೋ.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ
1998 ಪಂಪ ಪ್ರಶಸ್ತಿ
2000 ಮಾಸ್ತಿ ಪ್ರಶಸ್ತಿ
2001 ಹಂಪಿ ಕನ್ನಡ ವಿ.ವಿ. ಯಿಂದ ನಾಡೋಜ ಗೌರವ ಡಾಕ್ಟರೇಟ್
2004 ಮೈಸೂರು ವಿ.ವಿಯಿಂದ ಗೌರವ ಡಿ.ಲಿಟ್.
2006 ರಾಷ್ಟ್ರಕವಿ ಪುರಸ್ಕಾರ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ
2006 ಕುವೆಂಪು ವಿ.ವಿಯಿಂದ ಗೌರವ ಡಿ.ಲಿಟ್.
2007 ಬೆಂಗಳೂರು ವಿ.ವಿಯಿಂದ ಗೌರವ ಡಿ.ಲಿಟ್.
2007 ಕುವೈತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ
2010 ನೃಪತುಂಗ ಪ್ರಶಸ್ತಿ