ಕನ್ನಡ ಸಾಹಿತ್ಯ ಸಮ್ಮೇಳನ

1915 ರಿಂದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಮ್ಮೇಳವನ್ನು ಪ್ರತಿ ವರ್ಷವೂ ಆಯೋಜಿಸುತ್ತಾ ಬಂದಿದೆ. ಕನ್ನಡದ ಇತಿಹಾಸವನ್ನು ಪ್ರಚುರಪಡಿಸುವುದು ಮತ್ತು ಭಾಷೆಯನ್ನು ಬೆಳೆಸುವುದು ಸಮ್ಮೇಳನದ ಮೂಲ ಉದ್ದೇಶಗಳು.

ಕನ್ನಡಕ್ಕಾಗಿ ಅವಿರತ ದುಡಿದ, ಕನ್ನಡ ಭಾಷೆಗೆ ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ ಸಾಹಿತಿಗಳು, ಕವಿಗಳನ್ನು ಗುರುತಿಸಿ ಅವರನ್ನು ಈ ಸಮ್ಮೇಳನ ಅಧ್ಯಕ್ಷರನ್ನಾಗಿ ನಿಯೋಜಿಸಲಾಗುತ್ತದೆ.

ಇದುವರೆವಿಗೂ ಕನ್ನಡ ಸಾಹಿತ್ಯ ಸಮ್ಮೇಳನದ ನಡೆದ ಸ್ಥಳ ಮತ್ತು ಅಧ್ಯಕ್ಷರ ವಿವರಗಳು ಕೆಳಕಂಡಂತಿವೆ.

ಕ್ರಮ ಸಂಖ್ಯೆವರ್ಷಸ್ಥಳಅಧ್ಯಕ್ಷತೆ
11915ಬೆಂಗಳೂರುಎಚ್.ವಿ.ನಂಜುಂಡಯ್ಯ
21916ಬೆಂಗಳೂರುಎಚ್.ವಿ.ನಂಜುಂಡಯ್ಯ
31917ಮೈಸೂರುಎಚ್.ವಿ.ನಂಜುಂಡಯ್ಯ
41918ಧಾರವಾಡಆರ್.ನರಸಿಂಹಾಚಾರ್
51919ಹಾಸನಕರ್ಪೂರ ಶ್ರೀನಿವಾಸರಾವ್
61920ಹೊಸಪೇಟೆರೊದ್ದ ಶ್ರೀನಿವಾಸರಾವ
71921ಚಿಕ್ಕಮಗಳೂರುಕೆ.ಪಿ.ಪುಟ್ಟಣ್ಣ ಶೆಟ್ಟಿ
81922ದಾವಣಗೆರೆಎಂ.ವೆಂಕಟಕೃಷ್ಣಯ್ಯ
91923ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ
101924ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ
111925ಬೆಳಗಾವಿಬೆನಗಲ್ ರಾಮರಾವ್
121926ಬಳ್ಳಾರಿಫ.ಗು.ಹಳಕಟ್ಟಿ
131927ಮಂಗಳೂರುಆರ್.ತಾತಾಚಾರ್ಯ
141928ಕಲಬುರ್ಗಿಬಿ ಎಂ ಶ್ರೀ
151929ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್
161930ಮೈಸೂರುಆಲೂರು ವೆಂಕಟರಾಯರು
171931ಕಾರವಾರಮುಳಿಯ ತಿಮ್ಮಪ್ಪಯ್ಯ
181932ಮಡಿಕೇರಿಡಿ ವಿ ಜಿ
191933ಹುಬ್ಬಳ್ಳಿವೈ.ನಾಗೇಶ ಶಾಸ್ತ್ರಿ
201934ರಾಯಚೂರುಪಂಜೆ ಮಂಗೇಶರಾಯರು
211935ಮುಂಬಯಿಎನ್.ಎಸ್.ಸುಬ್ಬರಾವ್
221937ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ
231938ಬಳ್ಳಾರಿರಂಗನಾಥ ದಿವಾಕರ
241939ಬೆಳಗಾವಿಮುದವೀಡು ಕೃಷ್ಣರಾಯರು
251940ಧಾರವಾಡವೈ.ಚಂದ್ರಶೇಖರ ಶಾಸ್ತ್ರಿ
261941ಹೈದರಾಬಾದ್ಎ.ಆರ್.ಕೃಷ್ಣಶಾಸ್ತ್ರಿ
271943ಶಿವಮೊಗ್ಗದ.ರಾ.ಬೇಂದ್ರೆ
281944ರಬಕವಿಎಸ್.ಎಸ್.ಬಸವನಾಳ
291945ಮದರಾಸುಟಿ. ಪಿ. ಕೈಲಾಸಂ
301947ಹರಪನಹಳ್ಳಿಸಿ.ಕೆ.ವೆಂಕಟರಾಮಯ್ಯ
311948ಕಾಸರಗೋಡುತಿ.ತಾ.ಶರ್ಮ
321949ಕಲಬುರ್ಗಿಉತ್ತಂಗಿ ಚನ್ನಪ್ಪ
331950ಸೊಲ್ಲಾಪುರಎಮ್.ಆರ್.ಶ್ರೀನಿವಾಸಮೂರ್ತಿ
341951ಮುಂಬಯಿಗೋವಿಂದ ಪೈ
351952ಬೇಲೂರುಎಸ್.ಸಿ.ನಂದೀಮಠ
361954ಕುಮಟಾವಿ.ಸೀತಾರಾಮಯ್ಯ
371955ಮೈಸೂರುಶಿವರಾಮ ಕಾರಂತ
381956ರಾಯಚೂರುಶ್ರೀರಂಗ
391957ಧಾರವಾಡಕುವೆಂಪು
401958ಬಳ್ಳಾರಿವಿ.ಕೆ.ಗೋಕಾಕ
411959ಬೀದರಡಿ.ಎಲ್.ನರಸಿಂಹಾಚಾರ್
421960ಮಣಿಪಾಲಅ.ನ. ಕೃಷ್ಣರಾಯ
431961ಗದಗಕೆ.ಜಿ.ಕುಂದಣಗಾರ
441963ಸಿದ್ದಗಂಗಾರಂ.ಶ್ರೀ.ಮುಗಳಿ
451965ಕಾರವಾರಕಡೆಂಗೋಡ್ಲು ಶಂಕರಭಟ್ಟ
461967ಶ್ರವಣಬೆಳಗೊಳಆ.ನೇ.ಉಪಾಧ್ಯೆ
471970ಬೆಂಗಳೂರುದೇ.ಜವರೆಗೌಡ
481974ಮಂಡ್ಯಜಯದೇವಿತಾಯಿ ಲಿಗಾಡೆ
491976ಶಿವಮೊಗ್ಗಎಸ್.ವಿ.ರಂಗಣ್ಣ
501978ದೆಹಲಿಜಿ.ಪಿ.ರಾಜರತ್ನಂ
511979ಧರ್ಮಸ್ಥಳಗೋಪಾಲಕೃಷ್ಣ ಅಡಿಗ
521980ಬೆಳಗಾವಿಬಸವರಾಜ ಕಟ್ಟೀಮನಿ
531981ಚಿಕ್ಕಮಗಳೂರುಪು.ತಿ.ನರಸಿಂಹಾಚಾರ್
541981ಮಡಿಕೇರಿಶಂ.ಬಾ.ಜೋಶಿ
551982ಶಿರಸಿಗೊರೂರು ರಾಮಸ್ವಾಮಿ ಐಯಂಗಾರ್
561984ಕೈವಾರಎ.ಎನ್.ಮೂರ್ತಿ ರಾವ್
571985ಬೀದರ್ಹಾ.ಮಾ.ನಾಯಕ
581987ಕಲಬುರ್ಗಿಸಿದ್ದಯ್ಯ ಪುರಾಣಿಕ
591990ಹುಬ್ಬಳ್ಳಿಆರ್.ಸಿ.ಹಿರೇಮಠ
601990ಮೈಸೂರುಕೆ.ಎಸ್. ನರಸಿಂಹಸ್ವಾಮಿ
611992ದಾವಣಗೆರೆಜಿ.ಎಸ್.ಶಿವರುದ್ರಪ್ಪ
621993ಕೊಪ್ಪ್ಪಳಸಿಂಪಿ ಲಿಂಗಣ್ಣ
631994ಮಂಡ್ಯಚದುರಂಗ
641995ಮುಧೋಳಎಚ್ ಎಲ್ ನಾಗೇಗೌಡ
651996ಹಾಸನಚನ್ನವೀರ ಕಣವಿ
661997ಮಂಗಳೂರುಕಯ್ಯಾರ ಕಿಞ್ಞಣ್ಣ ರೈ
671999ಕನಕಪುರಎಸ್.ಎಲ್.ಭೈರಪ್ಪ
682000ಬಾಗಲಕೋಟೆಶಾಂತಾದೇವಿ ಮಾಳವಾಡ
692002ತುಮಕೂರುಯು.ಆರ್. ಅನಂತಮೂರ್ತಿ
702003ಬೆಳಗಾವಿಡಾ.ಪಾಟೀಲ ಪುಟ್ಟಪ್ಪ
712004ಮೂಡುಬಿದಿರೆಕಮಲಾ ಹಂಪನಾ
722006ಬೀದರ್ಶಾಂತರಸ ಹೆಂಬೆರಳು
732007ಶಿವಮೊಗ್ಗನಿಸಾರ್ ಅಹಮ್ಮದ್
742008ಉಡುಪಿಎಲ್. ಎಸ್. ಶೇಷಗಿರಿ ರಾವ್
752009ಚಿತ್ರದುರ್ಗಎಲ್. ಬಸವರಾಜು
762010ಗದಗಡಾ. ಗೀತಾ ನಾಗಭೂಷಣ
772011ಬೆಂಗಳೂರುಜಿ. ವೆಂಕಟಸುಬ್ಬಯ್ಯ
782012ಗಂಗಾವತಿಸಿ.ಪಿ ಕೃಷ್ಣಕುಮಾರ್
792013ವಿಜಯಪುರಕೋ.ಚನ್ನಬಸಪ್ಪ
802014ಕೊಡಗುನಾ ಡಿಸೋಜ
812015ಶ್ರವಣಬೆಳಗೊಳಡಾ. ಸಿದ್ದಲಿಂಗಯ್ಯ
822016ರಾಯಚೂರುಬರಗೂರು ರಾಮಚಂದ್ರಪ್ಪ
832017ಮೈಸೂರುಚಂದ್ರಶೇಖರ ಪಾಟೀಲ (ಚಂಪಾ)
84ಜನವರಿ 2019ಧಾರವಾಡಚಂದ್ರಶೇಖರ ಕಂಬಾರ
85ಫೆಬ್ರವರಿ 2020ಕಲಬುರ್ಗಿಎಚ್. ಎಸ್. ವೆಂಕಟೇಶಮೂರ್ತಿ