ಟಿ. ಪಿ. ಕೈಲಾಸಂ

T.P. Kailasam

ಆಧುನಿಕ ಕನ್ನಡ ನಾಟಕ ಕ್ಷೇತ್ರಕ್ಕೆ ಟಿ. ಪಿ. ಕೈಲಾಸಂ ಅವರ ಕೊಡುಗೆ ಅಪಾರ, ಅದಕ್ಕಾಗಿಯೆ ಅವರನ್ನು 'ಕರ್ನಾಟಕ ಪ್ರಹಸನ ಪಿತಾಮಹ' ಎಂದು ಕರೆಯುತ್ತಾರೆ.

ನಾಟಕದ ಅತೀ ನಾಟಕೀಯತೆಯನ್ನು ಸಾಮಾನ್ಯ ಮಟ್ಟಕ್ಕೆ ತಂದು, ಜನಸಾಮಾನ್ಯರು ತಮ್ಮ ಬಿಂಬವನ್ನು ಕಾಣುವಂತೆ ಮಾಡಿದರು. ಅದರಲ್ಲಿರುವ ಗ್ರಾಂಥಿಕ ಭಾಷೆಯನ್ನು, ಆಡು ಮಾತಿಗೆ ಬದಲಾಯಿಸಿ, ಜನರಿಗೆ ಹೆಚ್ಚು ತಲುಪುವಂತೆ ಮಾಡಿದರು. ಅವರು ನಾಟಕಗಳಲ್ಲಿನ ಕನ್ನಡಾಂಗ್ಲೋ ಪದಗಳ ಬಳಕೆ ಬಹು ವಿಶಿಷ್ಟವಾದುದು.

ತಮ್ಮ ನಾಟಕಗಳ ಮೂಲಕ ಕನ್ನಡಿಗರನ್ನು ನಗಿಸಿ, ನಲಿಸಿ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವರು ಕೈಲಾಸಂ, ಅದಕ್ಕಾಗಿಯೆ 'ಕನ್ನಡಕ್ಕೊಬ್ಬನೇ ಕೈಲಾಸಂ'.

ಸಂಕ್ಷಿಪ್ತ ಪರಿಚಯ

ನಿಜನಾಮ ತ್ಯಾಗರಾಜ ಪರಮಶಿವ ಕೈಲಾಸಂ
ಜನನ ೧೮೮೪ ಜುಲೈ ೨೯
ಮರಣ ೧೯೪೬ ನವೆಂಬರ್ ೨೩
ತಂದೆ ಟಿ. ಪರಮಶಿವ ಅಯ್ಯರ್
ತಾಯಿ ಕಮಲಮ್ಮ
ಜನ್ಮ ಸ್ಥಳ ಮೈಸೂರು


ಟೊಳ್ಳುಗಟ್ಟಿ ೧೯೨೨
ಪೋಲಿಕಿಟ್ಟಿ ೧೯೨೩
ಬಹಿಷ್ಕಾರ ೧೯೨೯
ಹೋಂರೂಲು ೧೯೩೦
ಗಂಡಸ್ಕತ್ರಿ ೧೯೩೦
ವೈದ್ಯನ ಜಾಡ್ಯ ೧೯೩೫
ತಾವರೆಕೆರೆ ೧೯೩೫
ತಾಳಿ ಕಟ್ಟೋಕ್ಕೂಲಿನೇ ೧೯೪೧
ಹುತ್ತದಲ್ಲಿ ಹುತ್ತ ೧೯೪೧
೧೦ ಬಂಡ್ವಾಳಿಲ್ಲದ ಬಡಾಯಿ ೧೯೪೨
೧೧ ಅಮ್ಮಾವ್ರ ಗಂಡ ೧೯೪೩
೧೨ ಸೀಕರ್ಣೆ ಸಾವಿತ್ರಿ ೧೯೪೩
೧೩ ಸತ್ತವನ ಸಂತಾಪ ೧೯೪೩
೧೪ ಅನುಕೂಲಕ್ಕೊಬ್ಬಣ್ಣ ೧೯೪೪
೧೫ ನಂಮ್ಕಂಪನಿ ೧೯೪೪
೧೬ ಬಹಿಷ್ಕಾರ ೧೯೪೪
೧೭ ನಮ್‍ಕ್ಲಬ್ಬು ೧೯೪೫
೧೮ ನಮ್ ಬ್ರಾಹ್ಮಣ್ಕೆ ೧೯೪೫
೧೯ ಸೂಳೆ ೧೯೪೫

ಇಂಗ್ಲೀಷ್

1 Little Lays & Plays 1933
2 Purpose 1944
3 The Brahmin's Curse (Karna) 1946

ಅಧ್ಯಕ್ಷತೆ

1945 29ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.