ಕೆ. ಎಸ್. ನಿಸಾರ್ ಅಹಮದ್

Nissar Ahmed

'ನಿತ್ಯೋತ್ಸವ ಕವಿ' ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್‍ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ.

೧೯೭೪ರಲ್ಲಿ ಪ್ರಕಟವಾದ 'ನಿತ್ಯೋತ್ಸವ' ಕವನ ಸಂಕಲನ, ನಿಸಾರ್ ರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟಿದೆ. ಇಂದು ಕೂಡ ಕನ್ನಡದ ಹಬ್ಬ ಎಲ್ಲೇ ನಡೆದರು ನಿತ್ಯೋತ್ಸವ ಕವಿತೆಯ ಗಾಯನವಿಲ್ಲದೆ ಅದು ಅಪೂರ್ಣ.

ನಿಸಾರರ ಅನೇಕ ಕವಿತೆಗಳು ಸುಗಮ ಸಂಗೀತದ ಧ್ವನಿ ಸುರುಳಿಗಳ ಮೂಲಕ ಕನ್ನಡಿಗರನ್ನು ತಲುಪಿವೆ. ಜನಪ್ರಿಯತೆ ಗಳಿಸಿರುವ 'ಸುಮಧುರ' ಮತ್ತು 'ನವೋಲ್ಲಾಸ' ಕನ್ನಡದ ಮೊದಲ ಜೋಡಿ ಧ್ವನಿ ಸುರುಳಿಗಳು. ಈವರೆಗೆ ಅವರ ಕವನಗಳ ಏಳು ಧ್ವನಿ ಸುರುಳಿಗಳು ಬಿಡುಗಡೆ ಗೊಂಡಿವೆ.

ಸಂಕ್ಷಿಪ್ತ ಪರಿಚಯ

ನಿಜನಾಮ ಕೊಕ್ಕರೆ ಹೊಸಳ್ಳಿ ಶೇಖಹೈದರ್ ನಿಸಾರ್ ಅಹಮದ್
ಜನನ 5 ಫೆಬ್ರುವರಿ 1936
ತಂದೆ ಕೆ. ಎಸ್. ಹೈದರ್
ತಾಯಿ ಹಮೀನ ಬೇಗಂ
ಜನ್ಮ ಸ್ಥಳ ದೇವನಹಳ್ಳಿ, ಬೆಂಗಳೂರು ಜಿಲ್ಲೆ
ಪತ್ನಿ ಷಹನವಾಜ್ ಬೇಗಂ

ಕವನ ಸಂಕಲನಗಳು

೧. ಮನಸು ಗಾಂಧಿ ಬಜಾರು ೧೯೬೦
೨. ನೆನೆದವರ ಮನದಲ್ಲಿ 19೬4
೩. ಸುಮಹೂರ್ತ ೧೯೬೭
೪. ಸಂಜೆ ಐದರ ಮಳೆ ೧೯೭೦
೫. ನಾನೆಂಬ ಪರಕೀಯ ೧೯೭೨
೬. ಆಯ್ದ ಕವಿತೆಗಳು ೧೯೭೪
೭. ನಿತ್ಯೋತ್ಸವ ೧೯೭೬
೮. ಸ್ವಯಂ ಸೇವೆಯ ಗಿಳಿಗಳು ೧೯೭೭
೯. ಅನಾಮಿಕ ಆಂಗ್ಲರು ೧೯೮೨
೧೦. ಬರಿರಂತರ ೧೯೯೦
೧೧. ಸಮಗ್ರ ಕವಿತೆಗಳು ೧೯೯೧
೧೨. ನವೋಲ್ಲಾಸ ೧೯೯೪
೧೩. ಆಕಾಶಕ್ಕೆ ಸರಹದ್ದುಗಳಿಲ್ಲ ೧೯೯೮
೧೪. ಅರವತ್ತೈದರ ಐಸಿರಿ( ೨೦೦೧
೧೫. ಸಮಗ್ರ ಭಾವಗೀತೆಗಳು ೨೦೦೧
೧೬. ಪ್ರಾತಿನಿಧಿಕ ಕವನಗಳು ೨೦೦

ವಿಮರ್ಶೆ ಮತ್ತು ವಿಚಾರ ಸಾಹಿತ್ಯ

೧. ಇದು ಬರಿ ಬೆಳಗಲ್ಲೋ ಅಣ್ಣ ೧೯೮೦
೨. ಮನದೊಂದಿಗೆ ಮಾತುಕತೆ ೧೯೯೧
೩. ಹಿರಿಯರು ಹರಸಿದ ಹೆದ್ದಾರಿ ೧೯೯೨
೪. ಅಚ್ಚುಮೆಚ್ಚು ೧೯೯೫
೫. ವಿಚಾರ ವಿಹಾರ ೧೯೯೮
೬. ಸಮಗ್ರ ಗದ್ಯ ಬರಹಗಳು ೨೦೦೨
೭. ಅಚ್ಚುಮೆಚ್ಚು (ಆಯ್ದ ಲೇಖನಗಳು) ೨೦೦೪
೮. ಸ-ರಸೋಕ್ತಿಗಳ ಸಂಗಾತಿ ೨೦೦೪
೯. ಸಪ್ತ ಸಂಪನ್ನರು ೨೦೦೯

ಅನುವಾದ

೧. ಎ ಮಿಡ್ ಸಮ್ಮರ್ ನೈಟ್ ಡ್ರೀಮ್ ೧೯೭೪
೨. ಒಥೆಲೋ ೧೯೭೭
೩. ಹೆಜ್ಜೆ ಗುರುತು ೧೯೮೭
೪. ಬರೀ ಮರ್ಯಾದಸ್ಥರೇ (ಲ್ಯಾಟಿನ್ ಅಮೇರಿಕಾದ ಸ್ಟ್ಯಾನಿಶ್ ಕವಿ ಮತ್ತು ನೋಬೆಲ್ ಪ್ರಶಸ್ತಿ ಪಾಬ್ಲೊನೆರುಡನ ಪರಿಚಯ ಮತ್ತು ೪೩ ಕವಿತೆಗಳ ಅನುವಾದ)

ಇತರೆ

೧. ಹಕ್ಕಿಗಳು ೧೯೭೮
೨. ಶಿಲೆಗಳು, ಖನಿಜಗಳು ೧೯೭೮
೩. ಬರ್ಡ್ಸ್ ೧೯೭೮
೪. ರಾಕ್ಸ್ ಅಂಡ್ ಮಿನರಲ್ಸ್ ೧೯೭೮
೫. ಪುಟ್ಟ ಸಂತರು ಮತ್ತು ಕವಿಗಳು ೧೯೭೮

ಸಂಪಾದನೆ

೧. ಅವಲೋಕನ
೨. ಚಂದನ (ತ್ರೈಮಾಸಿಕ)
೩. ದಶವಾರ್ಷಿಕ ಕವಿತೆಗಳು ೧೯೭೪-೮೩
೪. ದಶವಾರ್ಷಿಕ ವಿಮರ್ಶೆ ೧೯೭೪-೮೩
೫. ದಶವಾರ್ಷಿಕ ಪ್ರಬಂಧಗಳು ೧೯೭೪-೮೩
೬. ಟೆನ್ ಇಯರ್ಸ್ ಆಫ್ ಕನ್ನಡ ಪೊಯಟ್ರಿ ೧೯೭೪-೮೩
೭. ರತ್ನ ಸಂಪುಟ ೧೯೮೨
೮. ಮಾಸ್ತಿಯವರ ಚಿಕವೀರ ರಾಜೇಂದ್ರ - ಒಂದು ವಿವೇಚನೆ

ಕ್ಯಾಸೆಟ್‍ಗಳು/ಸಿಡಿ

೧. ನಿತ್ಯೋತ್ಸವ ೧೯೭೮
೨. ಅಪೂರ್ವ(ಕವನೋತ್ಸವ)
೩. ಸುಮಧುರ
೪. ನವೋಲ್ಲಾಸ
೫. ಅಭಿಷೇಕ
೬. ಹೊಂಬೆಳಕು
೭. ಮಿಲನೋತ್ಸವ ೨೦೦೭

ಗೌರವ/ಪ್ರಶಸ್ತಿ/ಪುರಸ್ಕಾರ

೧೯೮೧ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
೧೯೯೧ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
೧೯೯೩ ಡಾ|| ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ
೧೯೯೪ ಕರ್ನಾಟಕ ನಾಟಕ ಅಕಾಡೆಮೆ ಫೆಲೋಶಿಪ್
೧೯೯೪ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ
೧೯೯೬ ಡಾ|| ದೇ.ಜ.ಗೌ ಟ್ರಸ್ಟಿನ 'ವಿಶ್ವಮಾನವ ಪ್ರಶಸ್ತಿ'
೨೦೦೧ ಅ.ನ.ಕೃ ನಿರ್ಮಾಣ ಪ್ರಶಸ್ತಿ
೨೦೦೨ ಭೌತ ವಿಜ್ಞಾನಿ ಡಾ|| ತಾತಾಚಾರಿ ಸಾಹಿತ್ಯ ಪುರಸ್ಕಾರ
೨೦೦೩ ಮಂಗಳೂರಿನ 'ಸಂದೇಶ ಸಾಹಿತ್ಯ ಪ್ರಶಸ್ತಿ'
೨೦೦೩ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ
೨೦೦೫ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
೨೦೦೬ ಪ್ರತಿಷ್ಟಿತ 'ಮಾಸ್ತಿ'
೨೦೦೬ ಸಂಗೀತ ಗಂಗಾ ಪ್ರಶಸ್ತಿ
೨೦೦೬ ಕರ್ನಾಟಕದ ಸರಕಾರದ ದಿ.ಜವರೇಗೌಡ ಅರಸು ಪ್ರಶಸ್ತಿ
೨೦೦೭ 'ಕನ್ನಡ ರತ್ನ ತಿಲಕ' - ಪುರಸ್ಕಾರ ಕರ್ನಾಟಕ ರಕ್ಷಣಾ ವೇದಿಕೆ
೨೦೦೧ ಕನ್ನಡ ಕಂಪು ಪುರಸ್ಕಾರ - ಕೇಂದ್ರ ತೋಟಗಾರಿಕೆ ಸಂಶೋಧನ ಸಂಸ್ಥೆ
೨೦೦೨ ಸಹಕಾರ ರತ್ನ ಪುರಸ್ಕಾರ ಸಮಾನ್ ಪನಸ್ಕರ ವೇದಿಕೆಯಿಂದ
೨೦೦೨ 'ಭಾಗೀರಥಿ ಬಾಯಿ ಪ್ರಪ್ರಥಮ ಪ್ರಶಸ್ತಿ'
೨೦೦೩ 'ಚುಂಚ ಪ್ರಶಸ್ತಿ' - ಆದಿಚುಂಚನಗಿರಿ ಮಠದಿಂದ
೨೦೦೩ ಆದರ್ಶ ಸುಗಮ ಸಂಗೀತ ಪ್ರಶಸ್ತಿ
೨೦೦೮ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ

ಗ್ರಂಥಗಳು ಗಳಿಸಿದ ಗೌರವ

೧೯೭೮ 'ಹಕ್ಕಿಗಳು' ಮಕ್ಕಳ ಪುಸ್ತಕಕ್ಕೆ ಎನ್.ಸಿ.ಇ. ಆರ್.ಟಿ ರಾಷ್ಟ್ರೀಯ ಬಹುಮಾನ
೧೯೭೮ 'ಹಕ್ಕಿಗಳು' ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೧ 'ಹೆಜ್ಜೆಗುರುತು' (ಅನುವಾದ ಕೃತಿಗೆ) ಸೋವಿಯತ್ ಲ್ಯಾಂಡ್ - ನೆಹರೂ ಪ್ರಶಸ್ತಿ
೧೯೮೨ 'ಇದು ಬರಿ ಬೆಳಗಲ್ಲೋ ಅಣ್ಣ' ವಿಮರ್ಶಾ ಗ್ರಂಥಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕಾರ
೧೯೯೧ 'ಮನದೊಳಗೆ ಮಾತುಕತೆ' ಸೃಜನೇತರ ಗದ್ಯ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
೧೯೯೨ 'ಹಿರಿಯರು ಹರಸಿದ ಹೆದ್ದಾರಿ' ವೈಚಾರಿಕ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ