ತತ್ವ ಪದಗಳು

ಲೋಕದ ಕಾಳಜಿ ಮಾಡತೇನಂತಿ

ಲೋಕದ ಕಾಳಜಿ ಮಾಡತೇನಂತಿ ನೀ

ಯಾರು ಬ್ಯಾಡಾಂತಾರ ಮಾಡಪ್ಪ ಚಿಂತಿ ||

ನೀ ಮಾಡೋದು ಘಳಿಗಿ ಸಂತಿ

ಮೇಲು ಮಾಳಗಿ ಕಟ್ಟಬೇಕಂತಿ

ಆನೆ ಅಂಬಾರಿ ಏರಬೇಕಂತಿ

ಮಣ್ಣಲಿ ಇಳಯೊದ ಥಣ್ಣಗ ಮರತಿ ||

ಬದುಕು ಬಾಳೆವು ನಂದೆ ಅಂತೀ

ನಿಧಿ ಸೇರಿದಷ್ಟೂ ಸಾಲದು ಅಂತಿ

ಕದವ ತೆರೆದು ಕಡೆಯಾತ್ರೆಗೆ ನಡೆವಾಗ

ಒದಗದು ಯಾವುದೋ ಸುಮ್ಮನೆ ಅಳತಿ ||

ನೆಲೆಯು ಗೊವಿಂದನ ಪಾದದೋಳೈತಿ

ಅಲಕೊಂಡು ಹುಡುಕಿದರಿನ್ನೆಲ್ಲೈತಿ?

ಶಿಶುನಾಳುಧೀಶನ ದಯೆಯೊಳಗೈತಿ

ರಸಿಕನು ಹಾಡಿದ ಕವಿತೆಯೊಳೈತಿ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆವೃತ್ತಿ

ಇಂದಿನ ಕನ್ನಡ ಪದಬಂಧ ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಪದಬಂಧ ಹಾಗೂ ಪದ ಸರಪಳಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟ.