ಜಾನಪದ ಗೀತೆಗಳು

ಘಲ್ಲು ಘಲ್ಲೆನುತ ಗೆಜ್ಜೆ

ಜಾನಪದ

ರಚನೆ

ಜಾನಪದ

ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ

ಬಲ್ಲಿದ ರಂಗನ ವಲ್ಲಿಯ ಮೇಲೆ

ಚೆಲ್ಲಿದರೋಕುಳಿಯ, ನಮ್

ಬಲ್ಲಿದರಂಗನ ವಲ್ಲಿಯ ಮೇಲೆ

ಚೆಲ್ಲಿದರೋಕುಳಿಯೊ || ಪ ||

ಅರೆದರು ಅರಿಶಿಣವ

ಅದಕೆ ಬೆರೆಸೆರು ಸುಣ್ಣಾವ

ಅಂದವುಳ್ಳ ರಂಗನ ಮೇಲೆ

ಗಂಧದೋಕುಳಿಯೊ ||

ಹಾಲಿನೋಕುಳಿಯೋ

ಒಳ್ಳೆ ಲೀಲಾದೋಕುಳಿಯೊ

ಲೋಲನಾದ ರಂಗನ ಮೇಲೆ

ಹಾಲಿನೋಕುಳಿಯೊ ||

ತುಪ್ಪದೋಕುಲಿಯೋ

ಒಳ್ಳೆ ಒಪ್ಪದೋಕುಳಿಯೋ

ಒಪ್ಪವುಳ್ಳ ರಂಗನ ಮೇಲೆ

ತುಪ್ಪದೋಕುಳಿಯೊ ||

ಗಂಧದೋಕುಳಿಯೋ

ಒಳ್ಳೆ ಚೆಂದದೋಕುಳಿಯೋ

ಅಂದವಾದ ರಂಗನ ಮೇಲೆ

ರಂಗಿನೋಕುಳಿಯೊ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.