ಕೊಳಲನೂದಿ ಮೋಹಿಪುದನು

ಕೆ.ವಿ. ಪುಟ್ಟಪ್ಪ

ಕೊಳಲನೂದಿ ಮೋಹಿಪುದನು

ಕಲಿಸು ಎನಗೆ ಚೆನ್ನ

ತಳಮಳಿಪುದು ಎನ್ನ ಎದೆಯು

ಕೊಳಲ ಗನ ನಿನ್ನ ||

ನಲಿಯುತಿಹುದು ಉದಯಗಗನ

ಉದಯರಾಗದಿಂದ

ಕೊಳದಲೆಗಳು ಕುಣಿಯುತಿಹವು

ಗಾನದೊಲುಮೆಯಿಂದ ||

ಪರವಿಹಗಳ ನಲಿಸುತಿಹುದು

ನಿನ್ನ ಕೊಳಲನಾದ

ಪರವಿಹಗಳ ನುಲಿಸುತಿಹುದು

ನಿನ್ನ ಗಾನಮೋದ ||

ತಳಿತ ಚೂತದಡಿಯೆ ಮೊದಲ

ನುಡಿಯೆ ಕಲಿಸು ಚೆನ್ನ

ಕೊಳಲ ಕಲಿಸು ಬೇಗ ಎನಗೆ

ಮೋಹಿಸುವೆನು ನಿನ್ನ ||