ಈ ನಾಡ ಅಂದ ಈ ತಾಣ ಚೆಂದ

ಈ ಸೊಬಗ ಅಂದ ಈ ನೋಟ ಚೆಂದ

ಈ ಬೆಡಗು ಬಿನ್ನಾಣ ಈ ಸೊಗಸು ವಯ್ಯಾರ

ಉತ್ಸಾಹ ಉಲ್ಲಾಸ ಚೈತನ್ಯ ಆನಂದ || ಪ ||

ಹರಿಯುವ ಝರಿಗಳ ಧಾರೆಯ ದನಿ ಜುಳುಜುಳು

ಕಲರವ ಗುಂಪಿನ ಇಂಪಿನ ಧ್ವನಿ ಕಲಕಲ

ಇದೇ ಸ್ವರ್ಗ ಸ್ವರ್ಗ ಸ್ವರ್ಗ

ಈ ಬೆಡಗು ಬಿನ್ನಾಣ ಈ ಸೊಗಸು ವಯ್ಯಾರ

ಉತ್ಸಾಹ ಉಲ್ಲಾಸ ಚೈತನ್ಯ ಆನಂದ || ೧ ||

ಹೊ.. ಚೈತ್ರದ ಬೆಡಗು ಕೋಗಿಲೆ ಕಂಠದ ರಾಗದ ಸುಧೆಯು ಆಹಾ..

ಹೇ.. ಕಂಚಿನ ಸುಳಿಯ ಮೋಹಕ ಬಲೆಯ

ಎದುರಲಿ ಗೆಲುವನು ನೀ ನೀಡು ನೀಡು ನೀಡು

ಈ ಬೆಡಗು ಬಿನ್ನಾಣ ಈ ಸೊಗಸು ವಯ್ಯಾರ

ಉತ್ಸಾಹ ಉಲ್ಲಾಸ ಚೈತನ್ಯ ಆನಂದ || ೨ ||

ನಾಡು ನುಡಿ ಎಸ್. ಪಿ. ಬಾಲಸುಬ್ರಂಹ್ಮಣ್ಯಂ 

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail