ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ಅಮ್ಮ ಎಂಬುದೇ ಕಂದನ ಕರುಳಿನ ಕರೆಯೋಲೆ || ಪ ||

ಆ ಆ ಆಟ ಊಟ ಓಟ ಕನ್ನಡ ಒಂದನೇ ಪಾಠ

ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ || 1 ||

ಇ ಇ ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು

ಈ ಈ ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು || 2 ||

ಉ ಉ ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ

ಊ ಊ ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ || ೩ ||

ಋ ಋ ಎ ಏ ಐ ಭಾರತ ಮಾತೆಗೆ ಜೈ

ಒ ಒ ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು

ಓ ಓ ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು || ೪ ||

ಔ ಅಂ ಅ: ಅಹ ಆಹಾ ಆಅಹ್ಹ || ೫ ||

ಮಕ್ಕಳು ನಾಡು ನುಡಿ ಶಾಲೆ ಶಿಕ್ಷಣ 

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail