ಒಲವೆ ಜೀವನ ಸಾಕ್ಷಾತ್ಕಾರ
ಸಾಕ್ಷಾತ್ಕಾರ ಕಣಗಾಲ್ ಪ್ರಭಾಕರ ಶಾಸ್ತ್ರಿ
ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ || ಪ ||
ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ
ದುಂಬಿಯ ಹಾಡಿನ ಝೇಂಕಾರದಲ್ಲೂ
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೂ
ತುಂಬಿದೆ ಒಲವಿನ ಸಾಕ್ಷಾತ್ಕಾರ || ೧ ||
ವಸಂತ ಕೋಗಿಲೆ ಪಂಚಮ ನುಂಚರ
ಗಾಂಧಾರ ಭಾಷೆಯ ಹಕ್ಕಿಳಿಂಚರ
ಈ ಮಲೆನಾಡಿನ ಭೂರಮೆ ಶೃಂಗಾರ
ಒಲವಿನ ಚೆಲುವಿನ ಸಾಕ್ಷಾತ್ಕಾರ || ೨ ||
ಒಲವಿನ ಪೂಜೆಗೆ ಒಲವೇ ಮಂದಾರ
ಒಲವೇ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ || ೩ ||
ಸಾಕ್ಷಾತ್ಕಾರ
ಚಿತ್ರ ನೋಡಿ