ಆರಾಮಾಗೆ ಇದ್ದೆ ನಾನು
ಗೋಕುಲ ಜಯಂತ್ ಕಾಯ್ಕಿಣಿ
ಮನೋಮೂರ್ತಿ
ಆರಾಮಾಗೆ ಇದ್ದೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು, ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೆ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು || ಪ ||
ನೆನೆಯುತ ಬರೆದೆ ನೆನೆಯುತ
ಮನ ಇನ್ನೂನು ಭಾವುಕವಾಯಿತು
ಬಯಸುತ ಒಲವ ಬಯಸುತ
ಕ್ಷಣ ಒಂದೊಂದು ರೋಚಕವಾಯಿತು
ನಾನು ನೀನು ಕೂತುಕೊಂಡ ಜಾಗ
ನಮ್ಮ ಮಾತೆ ಆಡುತಾವೆ ಈಗ
ಪಿಸುಮಾತಾಡುತ ಅರೆ ಏನಾಯಿತು
ಸವಿ ಕನಸೊಂದು ಜೀವಂತವಾಯಿತು || ೧ ||
ಮರೆಯಿತು ಹೆಸರೆ ಮರೆಯಿತು
ಈ ಮುದ್ದಾದ ಮೋರೆಯ ನೋಡುತ
ಹೊರಟಿತು ಹೃದಯ ಹೊರಟಿತು
ನೀನಿದ್ದಲ್ಲೇ ಡೇರೆಯ ಹೂಡುತ
ಕಾಣದಂತೆ ಓಡಿಬಂದೆಯೇನು
ಕಾಡಿದಷ್ಟು ಪ್ರೀತಿ ಚೆಂದವೇನು
ಜೊತೆ ಒಡಾಡುತ ಅರೆ ಏನಾಯಿತು
ಈ ಬಡಜೀವ ಶ್ರೀಮಂತವಾಯಿತು || ೨ ||
ಗೋಕುಲ
ಚಿತ್ರ ನೋಡಿ