ಸುಖ ಎಲ್ಲಾರಿಗೆಲ್ಲೈತವ್ವ
ದುಃಖ ತುಂಬ್ಯಾದೆ ಮರುತ್ಯಾದ ಮ್ಯಾಲೆ
ತಾ ಮಾಡಿದ ಪಾಪ ತಾ ಕಳೆಯಬೇಕ
ಶಿವನ ಮ್ಯಾಲ್ಯಾಕ ಸಿಟ್ಟಾಗಬೇಕ ||
ಸತ್ಯವಂತನಾದ ಹರಿಶ್ಚಂದ್ರ ರಾಜಾ
ಹೆಂಡತಿ ಮಕ್ಕಳ ಮಾರಿ ಋಣವ ತೀರಿಸಿದ
ಹೊಲೆಯಗೆ ಹಾಳಾಗಿ ಸುಡುಗಾಡ ಕಾಯ್ದ ||
ತಂದೆ ಮಾತಿಗಾಗಿ ಶ್ರೀರಾಮಚಂದ್ರ
ಹದಿನಾಲ್ಕು ವರುಷ ವನವಾಸಕ್ಹೋದ
ಸೀತೆಯ ಕಳಕೊಂಡು ಬಲು ಕಷ್ಟಪಟ್ಟ ||
ಕೌರವರ ಮೋಸಾದಿ ಪಂಚಪಾಂಡವರು
ರಾಜ್ಯ ಕೋಶ ಬಿಟ್ಟು ಬವಣೆ ಪಟ್ಟರು
ಅಪಮಾನಗಳನೆಲ್ಲಾ ಸೈರಿಸಿಕೊಂಡರು ||
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು
ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!
ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.
