ಜಾನಪದ ಗೀತೆಗಳು

ಕೋಲು ಕೋಲಣ್ಣ ಕೋಲೆ

ಜಾನಪದ

ರಚನೆ

ಜಾನಪದ

ಕೋಲು ಕೋಲಣ್ಣ ಕೋಲೆ

ಕೋಲು ಕೋಲಣ್ಣ ಕೋಲೆ

ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ

ಮಲ್ಲಯ್ನ ಮಡದಿ ಮರುಗಮ್ಮ | ಇರುವುದು

ಕಲ್ಲು ಮಳಿಗೆ ಕೈಲಾಸ ||

ಮಲ್ಲಯ್ಯ ಶಿವನೀ ವೆಲ್ಲಿಗಬಿಟ್ರೆ

ಮಲ್ಲಿಗೆ ಬೆಳಗೋ ಮತಿಘಟ್ಟ | ರಾಮಂದ್ರೆ

ಬೆಳಗಾಗಿ ಬಿಟ್ಟು ಪರುಸೆಯ ||

ಒಕ್ಕಾಲ ಉರುಗೆಜ್ಜೆ ಒಕ್ಕಾಲ್ ಕಿರುಗೆಜ್ಜೆ

ಚೊಕ್ಕಾ ಬೆಳ್ಳಿ ಮಕರಂಭ

ಚೊಕ್ಕಾಬೆಳ್ಳೀಲಿ ಮಕರಂಭ ಕೀಲಕುದುರೆ

ಒಕ್ಕಾವು ಮಾರ್ನೋಮಿ ಪೌಜೀಗೆ ||

ಆನೆ ಶೃಂಗಾರವಾಗಿ ಅಂಗಾಳದ ಗೈದಾವೆ

ಜಾಣ ತಾನೇಕೆ ಒರಟಾನೆ

ಜಾಣ ತಾನೇಕೆ ಒರಟಾನೆ ಲೋ ನಿನ್ನ

ಡೋಲು ಲಾಲಿಸಿ ಕರೆದಾವೆ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.