ಆಡೋಣ ಬನ್ನಿ ಕಣ್ಣ ಮುಚ್ಚಾಲೆ
ತೂಗೋಣ ಬನ್ನಿ ಉಯ್ಯಾಲೆ
ಜೀವನ್ವೊಂದು ನಾಟಕ ಶಾಲೆ
ನಾವೆಲ್ಲ ಕುಣಿಯುವ ನರ್ತನ ಶಾಲೆ ||
ಸುತ್ತಾಲು ಚೆಲ್ಲಿದ ರಂಗುರಂಗೋಲೆ
ಬಳುಕುತ ಬರುವಳು ವನಮಾಲೆ
ಭರದಿಂದ ಬಂದು ಪಚ್ಚೆಯ ಸಾಲೆ
ತೂಗಾಡಿ ಕರೆದಾವು ತೆಂಗಿನ ಸಾಲೆ
ಉಯ್ಯಾಲೆ ಚಂಪಾಲೆ ||
ಹಕ್ಕಿಗಳಿಂಚರ ಕರೆಯೋಲೆ
ಕುಣಿಯುತ ಬರುವಳು ನವ್ವಾಲೆ
ಇಂಪು ಇಂಪಿನ ಗುಂಪು ಕೋಗಿಲೆ
ಕಂಪನು ಸೂಸುವ ಹೂಗಳ ಮಾಲೆ
ಉಯ್ಯಾಲೆ ಚಂಪಾಲೆ ||
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು
ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!
ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.
