ಅಕಾಲಮೃತ್ಯು
ಪಿಂಚಿಣಿ ತರುವವನು ಅದೆಷ್ಟು ತಡವಾಗಿ ಸತ್ತರೂ ಅದು ಮಕ್ಕಳ ಪಾಲಿಗೆ ಅಕಾಲಮೃತ್ಯು.
ಜೀವವಿಮೆ ಇಳಿಸಿದವರು ಮರುದಿನವೇ ಸತ್ತರೂ ಅದು ಮಡದಿಯ ಪಾಲಿಗೆ ಸಕಾಲ ಮೃತ್ಯು.
ಚಿಕ್ಕ ಹೆಂಡತಿ, ಪುಟ್ಟ ಗಂಟು ಬಿಟ್ಟು ಸತ್ತರೆ ಅದಾರ ಪಾಲಿಗೋ ಸಕಾಲ ಮೃತ್ಯು.
ಸಾಯದೇ ಉಳಿದರೆ ತನಗೇ ಅನುಗಾಲ ಮೃತ್ಯು.
ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ
ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು || ಪ ||
ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು || 1 ||
ನಾಯಿ ಮರಿ ಕಳ್ಳ ಬಂದರೇನು ಮಾಡುವೇ?
ಬೌ ಬೌ ಎಂದು ಕೂಗಿ ಕರೆಯುವೆ || ೨ ||
ಜಾಣ ಮರಿ ನಾನು ಹೋಗಿ ತಿಂಡಿ ತರುವೆನು
ನಾನು ನಿನ್ನ ಮನೆಯನ್ನು ಕಾಯುತಿರುವೆನು || ೩ ||