ಬಾರೆ ನನ್ನ ದೀಪಿಕಾ

ಮಧುರ ಕಾವ್ಯ ರೂಪಕ

ಕಣ್ಣ ಮುಂದೆ ಸುಳಿಯೆ ನೀನು

ನಿನ್ನ ಬೊಗಸೆಗಣ್ಣಿಗೆ

ಕೆನ್ನೆ ಜೇನುದೊನ್ನೆಗೆ

ಸಮ ಯಾವುದೆ ಚೆನ್ನೆ ನಿನ್ನ

ಜಡೆ ಹರಡಿದ ಬೆನ್ನಿಗೆ

ನಿನ್ನ ಕನಸು ಬಾಳಿಗೆ

ಧೂಪದಂತೆ ಗಾಳಿಗೆ

ಬೀಸಿ ಬರಲು, ಜೀವ ಹಿಗ್ಗಿ

ವಶವಾಯಿತೆ ಧಾಳಿಗೆ

ಮುಗಿಲ ಮಾಲೆ ನಭದಲಿ

ಹಾಲ ಪಯೆರು ಹೊಲದಲಿ

ರೂಪಿಸುತಿದೆ ನಿನ್ನ ಪ್ರೀತಿ

ಕವಿತೆಯೊಂದು ಎದೆಯಲಿ

ಕವಿತೆಪ್ರಣಯ

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail