ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸ ಕಂಡೆ

ಈ ಮನಸ್ಸಿನ ಭಾರಕ್ಕೆ ಹೂವಿನ ಹಗುರ ತಂದೆ

ಎಂದು ಕಾಣದ ಸವಿ ಕನಸೇ ನೀನಾ

ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕ

ನೀರು ಜೇನಾಯ್ತು ಹೇಗೊ ನಾನು ಅರಿಯೆ

ಹೀಗೆ ಜಸ್ಟ್ ಮಾತ್ ಮಾತಲ್ಲಿ|| ಪ ||

ಬಾನಲ್ಲಿ ಹಕ್ಕಿಯ ಮೀರಿ ಹಾರುವ ಕನಸು ಕಂಡೆ

ತಂಪಾದ ಮಂಜಿನ ಹನಿಯ ಮುತ್ತಿಕ್ಕೊ ಆಸೆಯ ಕಂಡೆ

ಪಯಣಕ್ಕೆ ಸವಿಯ ಸ್ನೇಹ ಸಿಕ್ಕಿದೆ ಇಲ್ಲಿ

ತೂರಿದೆ ನನ್ನ ಹೃದಯ ಬಾಳಿನಲ್ಲಿ

ಕಣ್ಣಿಗೆ ಹಚ್ಚಿದೆ ನಿ ಪ್ರೇಮದ ಬಣ್ಣ

ಹೀಗೆ ಜಸ್ಟ್ ಮಾತ್ ಮಾತಲ್ಲಿ|| ೧ ||

ನನ್ನ ಉಸಿರಿಗೆ ನೀ ಸ್ವರವೇ

ಆ ಸ್ವರಕೆ ನಿನ್ನ ಹೆಸರು ಪದವೇ

ಕೇಳಿದೆ ಕೋಗಿಲೆ ಆ ಹಾಡು ಹಾಡಲೆ

ಒಪ್ಪಿಗೆ ನಿನ್ನ ಕೇಳಿದೇ ಎ..ಎ|| ೨ ||

ಜಸ್ಟ್ ಮಾತ್ ಮಾತಲ್ಲಿ

ಚಿತ್ರ ನೋಡಿ