ಜಯಂತ್ ಕಾಯ್ಕಿಣಿ
ಮನೋ ಮೂರ್ತಿ

ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ

ನಿನ್ನಿಂದಲೆ ನಿನ್ನಿಂದಲೆ ಮನಸಿಂದು ಕುಣಿದಾಡಿದೆ

ಈ ಎದೆಯಲ್ಲಿ ಸಿಹಿಯಾದ ಕೋಲಹಾಲ

ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ

ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ

ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ|| ಪ ||

ಇರುಳಲ್ಲಿ ಜ್ವರದಂತೆ ಕಾಡಿ ಈಗಾ

ಹಾಯಾಗಿ ನಿಂತಿರುವೆ ಸರಿ ಏನು

ಬೇಕಂತಲೆ ಮಾಡಿ ಏನೋ ಮೋಡಿ

ಇನ್ನೆಲ್ಲೊ ನೊಡುವ ಪರಿ ಏನು

ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ || ೧ ||

ಹೋದಲ್ಲಿ ಬಂದಲ್ಲಿ ಎಲ್ಲಾ

ನಿನ್ನ ಸೊಂಪಾದ ಚೆಲುವಿನ ಗುಣಗಾನ

ಕೇಂದಿಗೆ ಗರಿಯಂಥ್ ನಿನ್ನ ನೋಟ

ನನಗೇನೊ ಅಂದಂತೆ ಅನುಮಾನ

ಕಣ್ಣಿಂದಲ್ಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ|| ೨ ||

ಮುಂಗಾರು ಮಳೆ

ಚಿತ್ರ ನೋಡಿ