ಜೊತೆಯಲಿ
ಗೀತಾ ಚಿ. ಉದಯಶಂಕರ್
ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೇ ಎಂದೂ
ಹೊಸ ಹರುಷವ ತರುವೆನು ಇನ್ನು ಎಂದೂ
ಓ.... ಎಂಥ ಮಾತಾಡಿದೆ ಇಂದು ನೀ, ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೆ ಹೇಳಿದೆ || ಪ ||
ಪ್ರೀತಿ ಎಂದರೇನು ಎಂದು ಈಗ ಅರಿತೆನು
ಸವಿ ನುಡಿಯಲಿ ತನು ಅರಳಿತು, ಸವಿ ಗನಸಲಿ ಮನ ಕುಣಿಯಿತು
ಒಲವಿನಾ ಈ ಮಾತಿಗೆ, ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಪ್ರೀತಿ ಕಾಣಿಕೆ || ೧ ||
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನಾ ಬಿಲ್ಲೇರುವಾ, ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಬಾಳುವ || ೨ ||
ಗೀತಾ
ಚಿತ್ರ ನೋಡಿ