ಚಿ. ಉದಯಶಂಕರ್
ರಾಜನ್ ನಾಗೇಂದ್ರ

ಎಲ್ಲಿರುವೇ ಮನವ ಕಾಡುವ ರೂಪಸಿಯೇ

ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ

ನೀನು ಎಲ್ಲಿರುವೇ|| ಪ ||

ತೇಲುವ ಈ ಮೋಡದ ಮೇಲೆ ನೀ ನಿಂತ ಹಾಗಿದೆ

ನಸು ನಗುತಾ ನಲಿನಲಿದು ನನ್ನ ಕೂಗಿದಂತಿದೆ

ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ

ತನುವೆಲ್ಲಾ ಹಗುರಾಗಿ ತೇಲಾಡುವಂತಿದೆ, ಆಡುವಂತಿದೆ || ೧ ||

ಕಣ್ಣಲ್ಲೇ ಒಲವಿನ ಗೀತೆ ನೀನು ಹಾಡಿದಂತಿದೆ

ನಿನ್ನಾಸೆ ಅತಿಯಾಗಿ ತೂರಾಡುವಂತಿದೆ

ಹಗಲಲ್ಲೂ ಚಂದ್ರನ ಕಾಣೋ ಹಾಗೆ ನನ್ನದಾಗಿದೆ

ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ || ೨ ||

ಬಯಲು ದಾರಿ

ಚಿತ್ರ ನೋಡಿ