ಕವಿತೆ ಕವಿತೆ

ವಿಜಯ ಪ್ರಕಾಶ್ ಹೃದಯಶಿವ ವಿ. ಹರಿಕೃಷ್ಣ

ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ

ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ

ಓ ಒಲವೆ ನೀ ತಂದ ಹಾಡಿಗೆ ನಾ ಸೋತೆ || ಪ ||

ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ

ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ

ಮನದ ಕಡಳ ದಡದಾಟೊ ಅಲೆಗಳಲು ನಲುಮೆ

ಹೊಮ್ಮುತಿದೆ ರಾಗದಲಿ ಸ್ವರಮೀರೊ ತಿಮಿರು || ೧ ||

ಚಿಮ್ಮುತಿದೆ ಸುಳ್ಳಾಡುವ ಕವಿಯಾಡೊ ಪೊಗರು

ಅವಳು ಬರಲು ಮನದಲ್ಲಿ ಪದಗಳದೆ ಚಿಲುಮೆ

ಮನದ ಕಡಳ ದಡದಾಟೊ ಅಲೆಗಳಲು ನಲುಮೆ

ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ

ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೊ ಪ್ರಣಯ || ೨ ||

ಉನ್ಮಾದ ತಾನಾಗಿ ಹಾಡಾಗೊ ಸಮಯ

ಏಕಾಂತ ಘಲ್ಲನ್ನು ಮಾಡುವುದೊ ಹೃದಯ

ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ

ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೊ ಪ್ರಣಯ || ೩ ||