ಎಂಥಾ ಸೌಂದರ್ಯ ನೋಡು

ಎಸ್. ಪಿ. ಬಾಲಸುಬ್ರಮಣ್ಯಂ ಆರ್. ಎನ್. ಜಯಗೋಪಾಲ್ ಇಳೆಯರಾಜ

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು

ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ

ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ

ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ

ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ

ಭರತ ಮಾತೆಯಾ ಈ ತನುಜಾತೆಯ

ಚೆಲುವನು ನೋಡುತ ನಲಿಯುತ ಮೆರೆಯುವೆನಾ

ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದ

ಸಾವಿರ ಭಾಷೆಯ, ಕಲಿತರು ಮನಕೇ, ಕನ್ನಡ ನುಡಿಮುತ್ತೆ ಅಂದ

ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ

ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ