ಆಹಾ ಈ ಬೆದರು

ಉದಿತ್ ನಾರಾಯಣ್, ಆನುರಾಧ ಶ್ರೀರಾಮ್ ಜಯಂತ್ ಕಾಯ್ಕಿಣಿ ವಿ. ಹರಿಕೃಷ್ಣ

ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ

ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ

ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ

ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ || ಪ ||

ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ

ಮುಂಗೋಪ ಏನು ನಿನ್ನ ಮೂಗುತಿಯೆ

ಸೂರ್ಯದ ಮುಖದಲ್ಲಿ ಮೀಸೆಯ ಬರೆಯುವೆಯ

ಚಂದ್ರನ ಕರೆದಿಲ್ಲಿ ದೋಸೆಯ ತಿನಿಸುವೆಯ

ಹುಟ್ಟೊ ದಿಲ್ಲಿನಲಿ ಮನಸ ತಲುಪೆವೆಯ

ಒ ಕಳೆದು ಹೋಗಿರುವೆ ದಾರಿ ತಿಳಿಸುವೆಯ || ೧ ||

ಪ್ರೀತೀಗೆ ಯಾಕೆ ಈ ಉಪವಾಸ

ಯಾತಕ್ಕು ಇರಲಿ ನಿನ್ನ ಸಹವಾಸ

ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ

ನೆನಪಿನ ಕೊಟ್ಟಿಗೆಗೆ ನಿನ್ನನ್ನೆ ನೂಕಿರುವೆ

ನಂಬಿ ಕೆಟ್ಟಿರುವೆ ಏನು ಪರಿಹಾರ

ನಿನಗೆ ಕಟ್ಟಿರುವೆ ಮನದ ಗಡಿಯಾರ|| ೨ ||