ಹೊಸ ಬೆಳಕು ಮೂಡುತಿದೆ

ಹೊಸ ಬೆಳಕು
ಡಾ|| ರಾಜ್ ಕುಮಾರ್

ಹೊಸ ಬೆಳಕು ಮೂಡುತಿದೆ

ಬಂಗಾರದ ರಥವೇರುತಾ

ಆಕಾಶದಿ ಓಡಾಡುತಾ

ಅತ್ತ ಇತ್ತ ಸುತ್ತ ಮುತ್ತಾ

ಚೆಲ್ಲಿದಾ ಕಾಂತಿಯಾ

ರವಿ ಕಾಂತಿಯಾ|| ಪ ||

ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ

ತಣ್ಣನೆ ಗಾಳಿ ಪರಿಮಳ ಹೀರಿ

ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ

ಹಕ್ಕಿ ಮುಗಿಲನ್ನು ನೋಡಿ

ಬೆಳಕು ಬಂತೆಂದು ಹಾಡಿ

ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ

ಬಾನಿಗೆ ಹಾರಿದೆ|| 1 ||

ಬೆಟ್ಟದಿಂದ ನೀರು ಜಾರಿ ಧುಮುಕುತಿದೆ

ಸಾಗರ ಸೇರೊ ಆಸೆಯ ತೋರಿ

ಗಾಳಿಯಂತೆ ವೇಗವಾಗಿ ಹರಿಯುತಲಿದೆ

ಬೆಳ್ಳಿ ಬೆಳಕನ್ನು ನೋಡಿ

ಮಂಜು ಮರೆಯಾಗಿ ಓಡಿ

ಎಲೆಯ ಮರೆಯ ಸೇರಿ ನಲಿವಾ

ಕೋಗಿಲೆ ಹಾಡಿದೆ|| ೨ ||

ಹೊಸ ಬೆಳಕು

ಚಿತ್ರ ನೋಡಿ