ಶ್ರಾವಣ ಮಾಸ
ಶ್ರಾವಣ ಬಂತು ಡಾ|| ರಾಜ್ ಕುಮಾರ್, ವಾಣಿ ಜಯರಾಮ್
ಚಿ. ಉದಯಶಂಕರ್
ರಂಗರಾವ್
ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ|| ಪ ||
ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ
ಯುಗವೊಂದು ದಿನವಾಗಿ ದಿನವೊಂದು ಕ್ಷಣವಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ|| 1 ||
ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ದಾಗಿ ಮಳೆ ಬಂದು ತಂಪಾಗಿ
ಸಂತೋಷ ಹೆಚ್ಚಾಗಿ ನವಿಲೊಂದು ಹುಚ್ಚಾಗಿ
ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ|| ೨ ||
ಶ್ರಾವಣ ಬಂತು
ಚಿತ್ರ ನೋಡಿ