ಮಲ್ಲಿಗೆ ಹೂವಿನಂಥ

ಒಂದು ಮುತ್ತಿನ ಕಥೆ
ಚಿ. ಉದಯಶಂಕರ್
ಎಲ್. ವೈದ್ಯನಾಥ್

ಮಲ್ಲಿಗೆ ಹೂವಿನಂಥ ಅಂದ ನಿನ್ನಲ್ಲಿ

ತಾವರೆ ಹೂವಿನಂತ ಚಂದ ಕಣ್ಣಲ್ಲಿ

ದುಂಬಿಯ ಹಾಡಂತೆ ಮಾತಿನ ಇಂಪಂತೆ

ನನಗೆ ಒಲಿದಾ ಮುದ್ದು ಚೆಲುವೆಯೇ|| ಪ ||

ಕಡಲ ನೀರಲ್ಲಿ ದಿನವೂ ಈಜೋಣ

ಜೋಡಿ ಮೀನಂತೆ ಆಟ ಆಡೋಣ

ಮುಗಿಲು ಕಪ್ಪಾಗಿ ಸಿಡಿಲ ಸದ್ದಾಗಿ

ಮಳೆಯು ಸುರಿದು ಬಳಿ ಬಂದಾಗ

ಓ ಹೆಣ್ಣೆ ನಾನಿನ್ನ ನೀ ನನ್ನ

ತೋಳಿಂದ ಅಪ್ಪುತ್ತಾ ತಂದೆನು ಆನಂದ|| ೧ ||

ಹಗಲು ಬಂದಂತೆ ಇರುಳು ಹೊದಂತೆ

ಕಾಲ ನಿಲ್ಲದೇನೆ ಜಾರಿ ಹೋದಂತೆ

ಪ್ರೀತಿ ಹಣ್ಣಾಯ್ತು ವರವ ತಂದಾಯ್ತು

ಸಂತೋಷ ಸಂಗೀತ ಎಂದೆಂದು

ಜೋಗುಳ ಹಾಡೋದೆ ಇನ್ನೆಂದು|| ೨ ||

ಒಂದು ಮುತ್ತಿನ ಕಥೆ

ಚಿತ್ರ ನೋಡಿ