ಬಿಂಕದ ‍ಸಿಂಗಾರಿ

ಕನ್ಯಾರತ್ನ
ಪಿ. ಬಿ. ಶ್ರೀನಿವಾಸ್
ಕು.ರಾ. ಸೀತಾರಾಮಶಾಸ್ತ್ರಿ
ಜಿ. ಕೆ. ವೆಂಕಟೇಶ್

ಬಿಂಕದ ಸಿಂಗಾರಿ

ಮೈ ಡೊಂಕಿನ ವಯ್ಯಾರಿ

ಈ ಸವಿಗಳಿಗೆ ರಸದೀವಳಿಗೆ

ನಿನ್ನಂತರಂಗ ಮಧುರಂಗ || ಪ ||

ಬಳಿ ನೀ ಬರಲು ಬಿಸಿಲೇ ನೆರಳು

ಮಧು ಪಾನಪಾತ್ರೆ ನಿನ್ನೊಡಲು

ಮಧುವಿಲ್ಲದೆ ಮದವೇರಿಪ

ನಿನ್ನಂದ ಚಂದ ಮಕರಂದ || ೧ ||

ನಿನ್ನೀವದನ ಅರವಿಂದ ವನ

ಹೂಬಾಣ ನಿನ್ನ ಬಿನ್ನಾಣ

ಒಲವೆಂಬ ಧನ ಬಿಡೆ ಹುಂಬತನ

ಬಾ ಚಿನ್ನ ರನ್ನ ವರಿಸೆನ್ನ || ೨ ||

ಕನ್ಯಾರತ್ನ

ಚಿತ್ರ ನೋಡಿ