ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ
ದೂರದ ಬೆಟ್ಟ ವಿಜಯನಾರಸಿಂಹ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೇ || ಪ ||
ನೀ ಪಕ್ಕ ಇದ್ರೆ ಇಂಗೇ ಬೆಟ್ಟಾನ್ ಎತ್ತೀನ್ ಬೆಳ್ನಾಗೆ
ಏಸೇ ಕಷ್ಟ ಬಂದ್ರು ನಂಗೇ, ಗೌರಾ
ಏಸೇ ಕಷ್ಟ ಬಂದ್ರು ನಂಗೇ, ನೀಸೇ ಬುಡ್ತಿನ್ ಸುಮ್ಗೆ || ೧ ||
ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗೆ ಹೂ ನಾನೆ
ಈ ನೆಮ್ಮ ಪಾದದಾಣೆ, ಈ ನಿಮ್ಮ ಪಾದದಾಣೆ
ನಿಮಗಿಂತ ದ್ಯಾವ್ರೆ ಕಾಣೆ || ೨ ||
ದೂರದ ಬೆಟ್ಟ
ಚಿತ್ರ ನೋಡಿ