ನೀನಾದೆ ನಾನೀನೊಲಿದ ಈ ಕ್ಷಣ

ನಿನ್ನಿಂದಲೇ ಹೊಸದೇನೊ ತಲ್ಲಣ

ಮಾತೆ ಬರುತಿಲ್ಲ ಯಾಕೊ ಗೊತ್ತಿಲ್ಲ

ಮೌನಿ ನಾನಾದೆ ಈ ದಿನ

ಹೇಗೊ ನಾನಿದ್ದೆ ಈಗ ಹೇಗಾದೆ

ಅದಕೆ ನೀ ತಾನೆ ಕಾರಣ || ಪ ||

ತೇಲಿದೆ ಮನ ನಿನ್ನ ನಗುವಿನ ಆ ತಿಳಿ ಆಗಸದಲಿ

ಜಾರಿದೆ ಕ್ಷಣ ನಿನ್ನ ಒಲವಿನ ಸಿಹಿಯಾದ ಅಪ್ಪುಗೆಯಲಿ

ಸೇಳೆದೇ ಕಣ್ಣಲೇ ಬೆರೆತೆ ನನ್ನಲೇ || ೧ ||

ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿ ಆಗಿರುವೆನೆ

ಬಿಡುಗಡೆಯನೆ ಎಂದು ಬಯಸದ ನಾ ಪ್ರೇಮ ಖೈದಿ ಕಣೆ

ಬರೆದೆ ಉಸಿರಲೇ ನಿನ್ನ ಹೆಸರನೆ || ೨ ||

ಮುರಳಿ ಮೀಟ್ಸ್ ಮೀರ

ಚಿತ್ರ ನೋಡಿ