ನೀ ಬಂದು ನಿಂತಾಗ
ಕಸ್ತೂರಿ ನಿವಾಸ ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ
ಆರ್. ಎನ್. ಜಯಗೋಪಾಲ್
ಜಿ, ಕೆ. ವೆಂಕಟೇಶ್
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಲೆದಾಗ ಸೋತೇ ನಾನಾಗ || ಪ ||
ವಾಸಂತಿ ನಲಿದಾಗ...
ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರೆಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೇ ಅನುರಾಗ,... ಬಾರಾ || ೧ ||
ಜೇನಂಥ ಮಾತಲ್ಲಿ...
ಜೇನಂಥ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ ಮರೆಯದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯೆಲ್ಲಿ ಮೊದಲೆಲ್ಲಿ
ಬಲುದೂರ ನೀ ಹೊಗೆ ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ ಬಾರೆ ಒಲವೆ............... ಬಾರಾ || ೨ ||
ಬಾಳೆಂಬ ಪತದಲಿ...
ಬಾಳೆಂಬ ಪತದಲಿ ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲಾ ಸೊಗಸಾಗಿ
ಯುಗವೊಂದು ದಿನವಾಗಿ ದಿನನವೊಂದು ಚಾಣವಗಿ
ನಮ್ಮಾಸೆ ಹೂವಗಿ ಇಂಪದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಯಂದೆಂದೂ ಜೊತೆಯಾಗಿ ನಡೆವಾ ಒಂದಾಗಿ,..... ಬಾರಾ || ೩ ||
ಕಸ್ತೂರಿ ನಿವಾಸ
ಚಿತ್ರ ನೋಡಿ