ನಿನ್ನ ನೀನು ಮರೆತರೇನು
ದೇವರ ಕಣ್ಣು ಚಿ. ಉದಯಶಂಕರ್
ನಿನ್ನ ನೀನು ಮರೆತರೇನು ಸುಖವಿದೆ
ತನ್ನ ತನವ ತೊರೆದರೇನು ಸೊಗಸಿದೆ || ಪ ||
ಹಾಡುವುದನು ಕೋಗಿಲೆಯು ಮರೆಯುವುದೇ
ಹಾರುವುದನು ಬಾನಾಡಿ ತೊರೆಯುವುದೇ
ಮೀನು ಈಜದಿರುವುದ, ದುಂಬಿ ಹೂವ ಮರೆವುದೇ,
ಮುಗುಲ ಕಂಡು ನವಿಲು ನಲಿಯದೇ || ೧ ||
ಗಾಳಿ ತನ್ನ ಚಲನೆಯನ್ನು ಮರೆಯುವುದೇ
ಬೆಳ್ಳಿಮೋಡ ತೇಲದೆ ನಿಲ್ಲುವುದೇ,
ತಾರೆ ಮಿನುಗದಿರುವುದೇ,
ಮಿಂಚು ಹೊಳೆಯದಿರುವುದೇ,
ನದಿಯು ಕಡಲ ಸ್ನೇಹ ಮರೆವುದೇ
ಸಗಮಗಗಮಪನಿ ಪನಿ| ಪನಿಸ...
ಸಾನಿಪಗಮನಿ ಸಾರಿಸಾ ಮಪಗಮಗ ಗರಿಸಾ|| ೨ ||
ದೇವರ ಕಣ್ಣು
ಚಿತ್ರ ನೋಡಿ